ಚೆನ್ನೈ: ಸಲಿಂಗಿಗಳ ನಡುವಿನ ಸಂಬಂಧ ಪ್ರಕರಣ ಕುರಿತು ಆದೇಶ ಹೊರಡಿಸುವುದಕ್ಕೂ ಮುನ್ನ ಈ ವಿಷಯವಾಗಿ ಮನೋವಿಜ್ಞಾನಕ್ಕೆ ಸಂಬಂಧಪಟ್ಟ ಶಿಕ್ಷಣ ಪಡೆಯಲು ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿಯೊಬ್ಬರು ನಿರ್ಧರಿಸಿದ್ದಾರೆ.

ನ್ಯಾಯಮೂರ್ತಿ ಎನ್.ಆನಂದ್ ವೆಂಕಟೇಶ ಈ ನಿರ್ಧಾರ ಕೈಗೊಂಡಿದ್ದಾರೆ. ‘ಇಂಥ ಪ್ರಕರಣಗಳಲ್ಲಿ ಆದೇಶ ಹೊರಡಿಸುವುದಕ್ಕೂ ಮೊದಲು ಸಲಿಂಗಿಗಳ ಸಂಬಂಧ ಕುರಿತು ಮನೋವೈಜ್ಞಾನಿಕವಾಗಿ ತಿಳಿದುಕೊಳ್ಳುವುದು ಮುಖ್ಯ. ಈ ವಿಷಯವಾಗಿ ವಿಚಾರ ಮಂಥನಕ್ಕೆ ನನ್ನನ್ನೇ ಒಡ್ಡಿಕೊಳ್ಳುವೆ’ ಎಂದು ಅವರು ಹೇಳಿದ್ದಾರೆ.

ಸಲಿಂಗಿ ಜೋಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ‘ಇಂಥ ಪ್ರಕರಣಗಳಲ್ಲಿ ಬುದ್ಧಿ ಬದಲಾಗಿ ಹೃದಯದಿಂದ ಪದಗಳು ಹೊರಹೊಮ್ಮಬೇಕು. ಈ ಪರಿಕಲ್ಪನೆ ಬಗ್ಗೆ ನನಗೆ ಅರಿವು ಇಲ್ಲದೇ ಹೋದರೆ ಹೃದಯದಿಂದ ಪದಗಳು ಹೊರಡಲು ಸಾಧ್ಯ ಇಲ್ಲ’ ಎಂದು ಪ್ರತಿಪಾದಿಸಿದರು.

‘ಈ ವಿಷಯವಾಗಿ ನನಗೆ ಮನೋವಿಜ್ಞಾನಿ ವಿದ್ಯಾ ದಿನಕರನ್ ಅವರು ಶಿಕ್ಷಣ ನೀಡಲಿದ್ದು, ಇದಕ್ಕಾಗಿ ಸೂಕ್ತವಾದ ದಿನ, ಸಮಯ ನಿಗದಿ ಮಾಡುವಂತೆ ಅವರನ್ನು ಕೋರುತ್ತೇನೆ’ ಎಂದು ಹೇಳಿದ ಅವರು, ಅರ್ಜಿಯ ವಿಚಾರಣೆಯನ್ನು ಜೂನ್ 7ಕ್ಕೆ ಮುಂದೂಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.