ನವದೆಹಲಿ:ದೇಶದಲ್ಲಿ ಮಂಕಿಪಾಕ್ಸ್ ವೈರಾಣು ಸೋಂಕಿನ ಪ್ರಕರಣಗಳು ದಿನೇ ದಿನೇ ಏರುತ್ತಿರುವಾಗ ಕೇಂದ್ರ ಆರೋಗ್ಯ ಸಚಿವಾಲಯ ರೋಗ ಹರಡದಂತೆ ತಡೆಗಟ್ಟಲು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ.

ಸೋಂಕಿತ ವ್ಯಕ್ತಿಯೊಂದಿಗೆ ದೀರ್ಘಕಾಲದ ಅಥವಾ ವ್ಯಕ್ತಿಗತ ಪುನರಾವರ್ತಿತ ನೇರ ಸಂಪರ್ಕ ಹೊಂದಿದ್ದಾಗ ಯಾರಿಗಾದರೂ ಈ ವೈರಸ್ ಸುಲಭವಾಗಿ ತಗುಲಬಹುದು ಎಂದು ಅದು ಎಚ್ಚರಿಸಿದೆ.

ಮಂಕಿಪಾಕ್ಸ್‌ನಿಂದ ದೂರವಿರಲು ಏನು ಮಾಡಬೇಕು?, ಏನು ಮಾಡಬಾರದು? ಸಲಹೆಗಳು ಹೀಗಿವೆ...

ಏನು ಮಾಡಬೇಕು?

* ಸೋಂಕಿತರನ್ನು ಪ್ರತ್ಯೇಕ ವಾಸದಲ್ಲಿರಿಸಿದರೆ ಬೇರೆಯವರಿಗೆ ರೋಗ ಹರಡದು

*ಕೈಗಳನ್ನು ಸೋಪು, ನೀರಿನಿಂದ ತೊಳೆಯಿರಿ ಅಥವಾ ಹ್ಯಾಂಡ್ ಸ್ಯಾನಿಟೈಸರ್ ಬಳಸಿ

* ಸೋಂಕಿತರ ಹತ್ತಿರ ಹೋಗುವಾಗ ಮುಖಕ್ಕೆ ಮಾಸ್ಕ್ ಧರಿಸಿ; ಬಳಸಿ ಬಿಸಾಡುವ ಕೈಗವಸು ಧರಿಸಿ

* ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಲು ಸೋಂಕು ನಿವಾರಕಗಳನ್ನು ಬಳಸಿ

ಏನು ಮಾಡಬಾರದು?

* ಸೋಂಕು ದೃಢಪಟ್ಟವರೊಂದಿಗೆ ಬಟ್ಟೆ, ಹಾಸಿಗೆ, ಟೋಪಿ...ಇತ್ಯಾದಿ ಹಂಚಿಕೊಳ್ಳಬಾರದು

* ಸೋಂಕಿನ ಲಕ್ಷಣಗಳಿದ್ದವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಬಾರದು

*ಸೋಂಕಿತರ ಬಟ್ಟೆಗಳು ಮತ್ತು ಸೋಂಕು ಇಲ್ಲದವರ ಬಟ್ಟೆಗಳನ್ನು ಒಟ್ಟೊಟ್ಟಿಗೆ ತೊಳೆಯಬಾರದು

* ಸೌಮ್ಯ ಲಕ್ಷಣಗಳಿದ್ದರೆ ರಕ್ತದಾನ, ಕೋಶ, ಅಂಗಾಂಗ,ಅಂಗಾಂಶ ದಾನ ಮಾಡಬಾರದು

* ಸೋಂಕಿತರು, ಶಂಕಿತ ಸೋಂಕಿತರನ್ನು ಕಳಂಕಿತರನ್ನಾಗಿ ನೋಡಬಾರದು

* ಯಾವುದೇ ವದಂತಿ ಅಥವಾ ಸುಳ್ಳುಗಳನ್ನು ನಂಬಬಾರದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.