ಔರಂಗಬಾದ್: 21 ವರ್ಷದ ಯುವತಿಯನ್ನು ಆಕೆಯ ಅಪ್ರಾಪ್ತ ತಮ್ಮ ಮತ್ತು ತಾಯಿಯೇ ಹತ್ಯೆ ಮಾಡಿದ ಘಟನೆ ಮಹಾರಾಷ್ಟ್ರದ ಔರಂಗಬಾದ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಆರೋಪಿಗಳು ಯುವತಿಯ ತಲೆಯನ್ನು ಕತ್ತರಿಸಿ, ಆಕೆಯ ತಲೆಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ವಿಕೃತಿ ಮೆರೆದಿರುವುದು ವರದಿಯಾಗಿದೆ. ಕುಟುಂಬದ ವಿರೋಧದ ನಡುವೆ ಬೇರೆ ಜಾತಿಯ ಯುವಕನನ್ನು ಮದುವೆಯಾಗಿದ್ದೇ ಹತ್ಯೆಗೆ ಕಾರಣ ಎನ್ನಲಾಗಿದೆ.

ವೈಜಾಪುರ್ ತೆಹಸಿಲ್‌ನ ಲಾಡ್‌ಗಾಂವ್ ಎಂಬಲ್ಲಿ ಭಾನುವಾರ ಮಧ್ಯಾಹ್ನ ಕೃತ್ಯ ನಡೆದಿದೆ.

'ಹತ್ಯೆಗೊಳಗಾದ 21 ವರ್ಷದ ಯುವತಿ ಕೃತಿ ಜೂನ್ 21ರಂದು ಅವಿನಾಶ್ ಥೋರ್ ಎಂಬುವವರನ್ನು ವಿವಾಹವಾಗಿದ್ದರು. ನವ ದಂಪತಿ ಗಾಯಗಾಂವ್ ಗ್ರಾಮದಲ್ಲಿ ನೆಲೆಸಿದ್ದರು. ಇದು ಯುವತಿಯ ಕುಟುಂಬದ ಸಿಟ್ಟಿಗೆ ಕಾರಣವಾಗಿತ್ತು. ಕೃತಿಯ ಅಪ್ರಾಪ್ತ ವಯಸ್ಸಿನ ತಮ್ಮ ಮತ್ತು ತಾಯಿ ಆಕೆಯ ಮನೆಗೆ ಆಗಮಿಸಿದ್ದರು. ಅವರಿಗೆ ಟೀ ಮಾಡುತ್ತಿದ್ದ ವೇಳೆ ಆಕೆಯ ತಲೆಯನ್ನು ಕತ್ತರಿಸಲಾಗಿದೆ' ಎಂದು ಪೊಲೀಸ್ ಅಧಿಕಾರಿ ಕೈಲಾಶ್ ಪ್ರಜಾಪತಿ ಹೇಳಿದ್ದಾರೆ.

'ಕೃತಿಯ ಹತ್ಯೆ ಮಾಡಿ, ಕತ್ತರಿಸಿದ ತಲೆಯ ಜೊತೆ ಆರೋಪಿಗಳು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ನಂತರ ಇಬ್ಬರು ವೈಜಾಪುರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ. ಅವಿನಾಶ್ ಮನೆಗೆ ಹಿಂತಿರುಗಿದಾಗ ಅಡುಗೆ ಮನೆಯಲ್ಲಿ ತಲೆ ಕತ್ತರಿಸಲ್ಪಟ್ಟ ಸ್ಥಿತಿಯಲ್ಲಿ ಪತ್ನಿಯ ಶವ ಬಿದ್ದಿರುವುದನ್ನು ಗಮನಿಸಿದ್ದಾರೆ' ಎಂದು ಪೊಲೀಸರು ತಿಳಿಸಿದ್ದಾರೆ.

ತಾಯಿ ಪ್ರೀತಿ: ಸ್ವಾಗತಿಸಲು ಹೂಗುಚ್ಛ ತಂದಿದ್ದ ಮಗನಿಗೆ ಚಪ್ಪಲಿ ಏಟು, ವಿಡಿಯೊ ನೋಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.