ನವದೆಹಲಿ: ಭಾರತ-ರಷ್ಯಾ ಸ್ನೇಹವನ್ನು ಪರೀಕ್ಷೆಗೊಡ್ಡುವ ಸಮಯವನ್ನು ಮೀರಿ ಬಲಿಷ್ಠವಾಗಿದೆ ಮತ್ತು ಲಸಿಕೆ ಕಾರ್ಯಕ್ರಮ ಸೇರಿದಂತೆ ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಉಭಯ ದೇಶಗಳ ನಡುವಿನ 'ದೃಢವಾದ' ಸಹಕಾರ ಉತ್ತಮವಾದದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಶ್ಲಾಘಿಸಿದ್ದಾರೆ.

ಈಸ್ಟರ್ನ್ ಎಕನಾಮಿಕ್ ಫೋರಮ್‌ನ (ಇಇಎಫ್) ಪೂರ್ಣ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಶಕ್ತಿಯು ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯ ಮತ್ತೊಂದು ಪ್ರಮುಖ ಆಧಾರ ಸ್ತಂಭವಾಗಿದೆ ಮತ್ತು ಭಾರತ ಮತ್ತು ರಷ್ಯಾ ಒಟ್ಟಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ತರಲು ಸಹಾಯ ಮಾಡುತ್ತಿವೆ ಎಂದು ಹೇಳಿದರು.

ಭಾರತವು ಪ್ರತಿಭಾವಂತ ಮತ್ತು ಸಮರ್ಪಿತ ಕಾರ್ಯಪಡೆಗಳನ್ನು ಹೊಂದಿದ್ದು, ದೂರಪ್ರಾಚ್ಯವು ಸಂಪನ್ಮೂಲಗಳಿಂದ ಸಮೃದ್ಧವಾಗಿದೆ. ಪೂರ್ವ ರಷ್ಯಾದ ಅಭಿವೃದ್ಧಿಗೆ ಕೊಡುಗೆ ನೀಡಲು ಭಾರತೀಯ ಪ್ರತಿಭೆಗಳಿಗೆ ಅಪಾರವಾದ ಅವಕಾಶವಿದೆ ಎಂದು ಹೇಳಿದರು.

ಫೋರಂನಲ್ಲಿ ಪಾಲ್ಗೊಳ್ಳಲು ಅವರು 2019 ರಲ್ಲಿ ರಷ್ಯಾದ ವ್ಲಾಡಿವೋಸ್ಟಾಕ್‌ಗೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡರು ಮತ್ತು 'ಆಕ್ಟ್ ಫಾರ್ ಈಸ್ಟ್ ಪಾಲಿಸಿ' ಗೆ ಭಾರತದ ಬದ್ಧತೆಯನ್ನು ಘೋಷಿಸಿದರು.

ಈ ನೀತಿಯು ರಷ್ಯಾದೊಂದಿಗಿನ ಭಾರತದ 'ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯ' ಒಂದು ಪ್ರಮುಖ ಭಾಗವಾಗಿದೆ ಎಂದು ಮೋದಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.