ಲಂಡನ್: ಭಾರತದಿಂದ ಪರಾರಿಯಾಗಿ ಬ್ರಿಟನ್‌ನಲ್ಲಿ ನೆಲೆಸಿರುವ ಉದ್ಯಮಿಗಳಾದ ವಿಜಯ್ ಮಲ್ಯ ಹಾಗೂ ನೀರವ್ ಮೋದಿ ಅವರನ್ನು ಶೀಘ್ರದಲ್ಲೇ ಭಾರತಕ್ಕೆ ಹಸ್ತಾಂತರಿಸಬೇಕು ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಅವರು ಬ್ರಿಟನ್ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರಿಗೆ ಗುರುವಾರ ಮನವಿ ಮಾಡಿದರು.

ಮೂರು ದಿನಗಳ ಯುರೋಪ್ ಪ್ರವಾಸದಲ್ಲಿರುವ ಶ್ರಿಂಗ್ಲಾ ಅವರು, ಗುರುವಾರ ಬ್ರಿಟನ್‌ನ ಹಲವು ಸಚಿವರು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.

‘ಚರ್ಚೆಯ ವೇಳೆ ಬ್ಯಾಂಕ್‌ಗಳಿಗೆ ಸಾಲ ತೀರಿಸದೇ ವಂಚನೆ ಎಸಗಿರುವ ವಿಜಯ್ ಮಲ್ಯ ಅವರನ್ನು ಹಸ್ತಾಂತರಿಸುವ ಕುರಿತು ಪಟೇಲ್ ಹಾಗೂ ದಕ್ಷಿಣ ಏಷ್ಯಾದ ವಿದೇಶಾಂಗ ಸಚಿವ ಲಾರ್ಡ್ ತಾರಿಖ್ ಅಹಮ್ಮದ್ ಅವರಿಗೆ ಮನವರಿಕೆ ಮಾಡಿದೆವು. ಬ್ರಿಟನ್‌ನಲ್ಲಿ ಮಲ್ಯ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿರುವುದರ ಕುರಿತೂ ಅವರಿಗೆ ಮಾಹಿತಿ ನೀಡಿದೆವು. ಜೊತೆಗೆ ನೀರವ್ ಮೋದಿ ಹಸ್ತಾಂತರದ ವಿಷಯವೂ ಚರ್ಚೆಯಾಯಿತು. ಈ ವಿಷಯವನ್ನು ಸೂಕ್ಷ್ಮವಾಗಿ ಹಾಗೂ ಗಂಭೀರವಾಗಿ ಇಬ್ಬರೂ ಪರಿಗಣಿಸಿದ್ದಾರೆ’ ಎಂದು ಶ್ರಿಂಗ್ಲಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.