ನವದೆಹಲಿ: ಅಗ್ನಿ-5 ಹೆಸರಿನ, ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯದ ಖಂಡಾಂತರ ಕ್ಷಿಪಣಿಯ ರಾತ್ರಿ ವೇಳೆಯ ಪ್ರಯೋಗವನ್ನು ಭಾರತ ಗುರುವಾರ ಯಶಸ್ವಿಯಾಗಿ ನಡೆಸಿದೆ. ಒಡಿಶಾ ಕರಾವಳಿಯಲ್ಲಿ ಈ ಪ್ರಯೋಗ ನಡೆಯಿತು.

ಈ ಕ್ಷಿಪಣಿಯು 5,000 ಕಿಲೊ ಮೀಟರ್ ಆಚೆಗಿನ ದೂರದ ಗುರಿಯ ಮೇಲೂ ದಾಳಿ ನಡೆಸಬಲ್ಲದು ಎಂದು ರಕ್ಷಣಾ ಇಲಾಖೆ ತಿಳಿಸಿದೆ.

ಮೊದಲಿಗಿಂತ ಈಗ ಹೆಚ್ಚು ಹಗುರವಾಗಿರುವ ಕ್ಷಿಪಣಿಯಲ್ಲಿನ ಹೊಸ ತಂತ್ರಜ್ಞಾನಗಳು ಮತ್ತು ಉಪಕರಣಗಳನ್ನು ಮೌಲ್ಯೀಕರಿಸಲು ಈ ಪರೀಕ್ಷೆಯನ್ನು ನಡೆಸಲಾಯಿತು ಎಂದು ಹೇಳಲಾಗಿದೆ.

ಅಗತ್ಯ ಸಂದರ್ಭದಲ್ಲಿ ವ್ಯಾಪ್ತಿಯನ್ನು ಹೆಚ್ಚು ಮಾಡಲು ಅವಕಾಶವಿದೆಯೇ ಎಂಬುದನ್ನು ಪರೀಕ್ಷಿಸಲು ನಡೆಸಿದ ಪ್ರಯೋಗವೂ ಯಶಸ್ವಿಯಾಗಿದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.