ನವದೆಹಲಿ: ಭಾರತೀಯನೌಕಾಪಡೆ ಕಮಾಂಡರ್ ಅಭಿಲಾಷ್ ಟಾಮಿ ಅವರನ್ನುಹಿಂದೂಮಹಾಸಾಗರದ ದಕ್ಷಿಣ ಭಾಗದಲ್ಲಿ ಸೋಮವಾರ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ಟ್ರೇಲಿಯಾದ ರಕ್ಷಣಾ ಸಹಕಾರ ಕೇಂದ್ರ, ರಕ್ಷಣಾ ಇಲಾಖೆ ಹಾಗೂಭಾರತೀಯ ನೌಕಾಪಡೆ ಜತೆಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದವು. ಇದಕ್ಕಾಗಿ ಭಾರತದ ಪಿ–8ಐ ಸರ್ವೇಕ್ಷಣಾ ವಿಮಾನವನ್ನು ನಿಯೋಜಿಸಲಾಗಿತ್ತು.

ಒಬ್ಬಂಟಿಯಾಗಿ ವಿಶ್ವ ಪರ್ಯಟನೆ ನಡೆಸುವ ‘ಗೋಲ್ಡನ್ ಗ್ಲೋಬ್ ರೇಸ್’ ಸ್ಪರ್ಧೆಯಲ್ಲಿ ಟಾಮಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಮೂರು ದಿನಗಳ ಹಿಂದೆ ಅವರ ಹಾಯಿದೋಣಿ ಹಾನಿಗೊಳಗಾಗಿ ಅವರು ಸಮುದ್ರದ ಮಧ್ಯಭಾಗದಲ್ಲಿ ಸಿಲುಕಿದ್ದರು.

ಬೆನ್ನಿನ ಭಾಗಕ್ಕೆ ತೀವ್ರ ಪೆಟ್ಟಾಗಿದ್ದರಿಂದ ಹಾಯಿದೋಣಿಯಲ್ಲಿ ಅವರು ತೀವ್ರ ಸಂಕಷ್ಟ ಎದುರಿಸುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.