ಮುಂಬೈ: ಜೆಟ್ ಏರ್ವೇಸ್ ಸಂಸ್ಥೆಯ ಬಿಕ್ಕಟ್ಟಿನಲ್ಲಿ ಸಿಲುಕಿರುವ ಉದ್ಯೋಗಿಗಳಿಗೆ ಸ್ಪೈಸ್ ಜೆಟ್ನಲ್ಲಿ ಉದ್ಯೋಗ ಕಲ್ಪಿಸಿಕೊಡಲಾಗುವುದು ಎಂದು ಸಂಸ್ಥೆ ಹೇಳಿದೆ.

ಸ್ಪೈಸ್ ಜೆಟ್ ಸಂಸ್ಥೆಗೆ22 ಬೋಯಿಂಗ್ 737 ವಿಮಾನಗಳು ಸೇರಿದಂತೆ ಇನ್ನೂ 27 ಹೆಚ್ಚುವರಿ ವಿಮಾನಗಳು ಸೇರ್ಪಡೆಗೊಳ್ಳಲಿದ್ದು, ನೂತನ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿಯೂ ನಿರಂತರ ವಿಮಾನಗಳ ಹಾರಾಟ ಆರಂಭಿಸಲಾಗುವುದು. ಈ ಸಮಯದಲ್ಲಿ ಸಂಸ್ಥೆಗೆ ಹೆಚ್ಚಿನ ಉದ್ಯೋಗಿಗಳ ಅಗತ್ಯವಿದ್ದು, ಜೆಟ್ ಏರ್ವೇಸ್ ಸಂಸ್ಥೆಯ ಉದ್ಯೋಗಿಗಳಿಗೆ ಮೊದಲ ಆದ್ಯತೆ ನೀಡಿ ಅವಕಾಶ ನೀಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಅಜಯ್ಸಿಂಗ್ ಶುಕ್ರವಾರ ತಿಳಿಸಿದ್ದಾರೆ.

ಸ್ಪೈಸ್ ಜೆಟ್ ಸಂಸ್ಥೆಯು ಈಗಾಗಲೇ ಜೆಟ್ ಏರ್ವೇಸ್ ಸಂಸ್ಥೆಯ 100 ಮಂದಿ ಪೈಲಟ್ಗಳೂ ಸೇರಿದಂತೆ 200 ಕ್ಕೂ ಹೆಚ್ಚು ತಾಂತ್ರಿಕ ವರ್ಗದ ಸಿಬ್ಬಂದಿಗೆ ಉದ್ಯೋಗ ನೀಡಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜೆಟ್ ಏರ್ವೇಸ್ ಸಂಸ್ಥೆಯ ಉದ್ಯೋಗಿಗಳಿಗೆ ಅವಕಾಶ ಮಾಡಿಕೊಡಲಾಗುವುದು, ಅಲ್ಲದೆ, ನಮ್ಮ ಸಂಸ್ಥೆಗೆ ಮತ್ತಷ್ಟು ಹೊಸ ವಿಮಾನಗಳು ಸೇರ್ಪಡೆಗೊಳ್ಳಲಿವೆ.

ಸಂಸ್ಥೆಯ 24 ಹೊಸ ವಿಮಾನಗಳು ಏಪ್ರಿಲ್ 26ರಿಂದ ಮೇ 2ರ ನಡುವೆಸಂಚಾರ ಆರಂಭಿಸಲಿವೆ. ಅಲ್ಲದೆ, ಮುಂಬೈನಿಂದ ಅಂತಾರಾಷ್ಟ್ರೀಯ ಮಾರ್ಗಗಳಾದ ಹಾಂಗ್ ಕಾಂಗ್ , ಜಿಡ್ಡಾ, ದುಬೈ, ಕೊಲಂಬೋ, ಡಾಕಾ, ರಿಯಾದ್, ಬ್ಯಾಂಕಾಕ್ ಹಾಗೂ ಕಠ್ಮಂಡು ಮಾರ್ಗಗಳ ನಡುವೆನಿರಂತರ ಹಾರಾಟ ನಡೆಸುವ ಯೋಜನೆಯಿದೆ. ಈ ವಿಮಾನ ಮಾರ್ಗಗಳಲ್ಲಿ ಮೇ ತಿಂಗಳಿನಿಂದ ಸಂಚಾರ ಆರಂಭಗೊಳ್ಳುವ ನಿರೀಕ್ಷೆ ಇದೆ ಎಂದು ಸಂಸ್ಥೆ ಹೇಳಿದೆ.

ಭಾರತೀಯ ವಿಮಾನ ಪ್ರಯಾಣಿಕರಿಗೆ ಈ ಬೇಸಿಗೆ ರಜೆಯಲ್ಲಿ ಪ್ರಯಾಣಕ್ಕೆ ಯಾವುದೇರೀತಿಯ ತೊಂದರೆ, ಅಡಚಣೆಯಾಗುವುದನ್ನು ತಪ್ಪಿಸಲು ಸ್ಪೈಸ್ ಜೆಟ್ ಸಂಸ್ಥೆಯು ಪ್ರಯತ್ನಿಸುತ್ತಿದೆ ಎಂದು ಸಿಂಗ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.