ರಾಂಚಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸತತ ಎರಡನೇ ದಿನ ಮಂಗಳವಾರದಂದು ಜಾರ್ಖಂಡ್‌ನ ಕಾಂಗ್ರೆಸ್ ಶಾಸಕಿ ಅಂಬಾ ಪ್ರಸಾದ್ ಅವರನ್ನು ಆರು ತಾಸುಗಳ ಕಾಲ ವಿಚಾರಣೆ ನಡೆಸಿರುವ ಜಾರಿ ನಿರ್ದೇಶನಾಲಯ, ಇಂದು (ಬುಧವಾರ) ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಇ.ಡಿ ಕಚೇರಿಗೆ ಮಧ್ಯಾಹ್ನ 3.10ರ ಸುಮಾರಿಗೆ ತೆರಳಿದ್ದ ಅಂಬಾ ಪ್ರಸಾದ್, ರಾತ್ರಿ 9.20ಕ್ಕೆ ಅಲ್ಲಿಂದ ಮರಳಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಸಾದ್, 'ಬುಧವಾರ ಮತ್ತೆ ಇ.ಡಿ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ. ತನಿಖೆಯಲ್ಲಿ ನಿಜವಾದ ಸಮಸ್ಯೆ ಏನು ಎಂಬುದು ನನಗೆ ಅರ್ಥವಾಗುತ್ತಿಲ್ಲ' ಎಂದು ಹೇಳಿದ್ದಾರೆ.

ಈ ಹಿಂದೆ ಏಪ್ರಿಲ್ 8ರಂದು ವಿಚಾರಣೆಯ ವೇಳೆ ಭೂಹಗರಣ ಸಂಬಂಧಿಸಿದ ಪ್ರಶ್ನೆ ಕೇಳಲಾಗಿತ್ತೇ ಎಂಬುದಕ್ಕೆ ಉತ್ತರಿಸಿದ್ದ ಪ್ರಸಾದ್, 'ಈ ಪ್ರಶ್ನೆಯನ್ನು ಮಾಧ್ಯಮಗಳು ಮಾತ್ರ ಕೇಳುತ್ತಿವೆ. ಭೂಕಬಳಿಕೆ ಸಮಸ್ಯೆ ಹೇಗೆ ಬಂತು ಎಂದು ಗೊತ್ತಿಲ್ಲ. ನನಗೆ ಜಮೀನಿನ ಮೇಲೆ ಯಾವುದೇ ಆಸಕ್ತಿ ಇಲ್ಲ' ಎಂದು ಹೇಳಿದ್ದರು.

ಬಹುತೇಕ ಪ್ರಶ್ನೆಗಳು ಇ.ಡಿ ತನ್ನಿಂದ ವಶಪಡಿಸಿಕೊಂಡಿದ್ದ ಎಲೆಕ್ಟ್ರಾನಿಕ್ ಡಿವೈಸ್‌ಗಳಿಗೆ ಸಂಬಂಧಪಟ್ಟದ್ದಾಗಿತ್ತು ಎಂದು ಅವರು ಹೇಳಿದ್ದರು.

ಸುಲಿಗೆ ಮತ್ತು ಭೂಕಬಳಿಕೆ ಪ್ರಕರಣದಲ್ಲಿ ಅಂಬಾ ಪ್ರಸಾದ್ ಅವರ ತಂದೆ ಮಾಜಿ ಸಚಿವ ಯೋಗೇಂದ್ರ ಸಾವ್ ಅವರು ಏಪ್ರಿಲ್ 3 ಹಾಗೂ 4ರಂದು ಸತತ ಎರಡು ದಿನಗಳ ಕಾಲ ಇ.ಡಿ ವಿಚಾರಣೆಯನ್ನು ಎದುರಿಸಿದ್ದರು.

ಅಕ್ರಮ ಮರಳು ಗಣಿಗಾರಿಕೆ, ಸುಲಿಗೆ ಮತ್ತು ಇತರೆ ಅಪರಾಧಗಳಿಗೆ ಸಂಬಂಧಿಸಿದಂತೆ ದಾಖಲಾದ ಎಫ್‌ಐಆರ್‌ಗಳ ಆಧಾರದಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಅಡಿಯಲ್ಲಿ ಇ.ಡಿ ವಿಚಾರಣೆ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.