ಮುಂಬೈ: ಭಾರತೀಯ ಚಿತ್ರರಂಗ ಕಂಡ ಅಪ್ರತಿಮ ಕನಸುಗಾರ ಹಾಗೂ ‘ಶೋ ಮ್ಯಾನ್‘ ರಾಜ್ ಕಪೂರ್ ಅವರ ಕನಸಿನ ಕೂಸಾದ ‘ಆರ್.ಕೆ. ಸ್ಟುಡಿಯೊ’ ಮಾರಾಟಕ್ಕಿದೆ!

ಆರ್.ಕೆ. ಸ್ಟುಡಿಯೊ ಮಾರಾಟವನ್ನು ಕಪೂರ್ ಕುಟುಂಬ ದೃಢಪಡಿಸಿದೆ. ನಿರ್ವಹಣಾ ವೆಚ್ಚದ ಆರ್ಥಿಕ ಹೊರೆಯಿಂದ ಪಾರಾಗಲು ಈ ನಿರ್ಧಾರಕ್ಕೆ ಬಂದಿರುವುದಾಗಿ ರಾಜ್ ಕಪೂರ್ ಅವರ ಪುತ್ರ ಹಾಗೂ ಬಾಲಿವುಡ್ ನಟ ರಿಷಿ ಕಪೂರ್
ಸ್ಪಷ್ಟಪಡಿಸಿದ್ದಾರೆ.

ರಾಜ್ ಕಪೂರ್ ನಾಲ್ಕು ದಶಕಗಳ ಹಿಂದೆ ಮುಂಬೈನ ಚೆಂಬೂರಿನಲ್ಲಿ ಈ ಸ್ಟುಡಿಯೊ ಸ್ಥಾಪಿಸಿದ್ದರು.

‘ಸ್ಟುಡಿಯೊ ನಿರ್ವಹಣೆ ಬಿಳಿ ಆನೆ ಸಾಕಿದಂತಾಗುತ್ತಿದೆ. ಇದರಿಂದ ಆರ್ಥಿಕ ನಷ್ಟ ಅನುಭವಿಸುತ್ತಿದ್ದು, ಸ್ಟುಡಿಯೊ ಮಾರಾಟಕ್ಕೆ ಕುಟುಂಬ ಒಮ್ಮತದ ನಿರ್ಣಯ ತೆಗೆದುಕೊಂಡಿದೆ’ ಎಂದು ಇಂಗ್ಲಿಷ್ ದೈನಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಿಷಿ ಕಪೂರ್ ತಿಳಿಸಿದ್ದಾರೆ. ‘ನಮ್ಮ ತಂದೆ ಸ್ಥಾಪಿಸಿದ ಆರ್.ಕೆ. ಸ್ಟುಡಿಯೊದೊಂದಿಗೆ ಕುಟುಂಬದ ಎಲ್ಲರಿಗೂ ಭಾವನಾತ್ಮಕ ನಂಟು ಇದೆ. ಸ್ಟುಡಿಯೊ ಮಾರಾಟ ನಿಜಕ್ಕೂ ನೋವಿನ ವಿಷಯ. ಆದರೆ, ಇದು ಅನಿವಾರ್ಯ’ ಎಂದು ಅವರು ನೋವು ತೋಡಿಕೊಂಡಿದ್ದಾರೆ.

ಸ್ಟುಡಿಯೊ ಮಾರಾಟಕ್ಕೆ ಕಾಲಮಿತಿ ನಿಗದಿ ಪಡಿಸಿಲ್ಲ. ಯಾವಾಗ ಬೇಕಾಗದರೂ ಮಾರಾಟ ಮಾಡಬಹುದು ಎಂದುಅವರು ಹೇಳಿದ್ದಾರೆ.

‘ಸ್ಟುಡಿಯೊದಿಂದ ಆಗುತ್ತಿರುವ ನಷ್ಟ ಭರಿಸುವುದು ನಮ್ಮಿಂದ ಸಾಧ್ಯವಾಗುತ್ತಿಲ್ಲ. ನಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಈ ಸ್ಟುಡಿಯೊ ಹೊರೆಯಾಗುವುದು ಬೇಡ ಎಂದು ಸಹೋದರರೆಲ್ಲಸಾಕಷ್ಟು ಯೋಚಿಸಿ ಈ ನಿರ್ಧಾರಕ್ಕೆ ಬಂದಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

ಕಳೆದ ವರ್ಷ ರಿಯಾಲಿಟಿ ಶೋ ಚಿತ್ರೀಕರಣದ ವೇಳೆ ಸ್ಟುಡಿಯೊದಲ್ಲಿ ಕಾಣಿಸಿಕೊಂಡ ಬೆಂಕಿ ಗೆ ಮೌಲ್ಯಯುತ ವಸ್ತುಗಳು ಬೆಂಕಿಗಾಹುತಿಯಾಗಿದ್ದವು.

ಆವಾರಾ, ಶ್ರೀ420, ಮೇರಾ ನಾಮ್ ಜೋಕರ್, ಬಾಬ್ಬಿ, ಸಂಗಮ್ ಸೇರಿದಂತೆ ಅನೇಕ ಚಿತ್ರಗಳು ಈ ಸ್ಟುಡಿಯೊದಲ್ಲಿ ಚಿತ್ರೀಕರಣವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.