ನವದೆಹಲಿ: ನಕ್ಸಲರಿಗೆ ನೆರವು ಮತ್ತುಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಬಂಧಿತರಾಗಿದ್ದ ಐವರುಸಾಮಾಜಿಕ ಹೋರಾಟಗಾರರ ಪೈಕಿ ಗೌತಮ್ ನವಲಖಾ ಒಬ್ಬರನ್ನುದೆಹಲಿ ಹೈಕೋರ್ಟ್ ಸೋಮವಾರ ಗೃಹ ಬಂಧನದಿಂದ ಬಿಡುಗಡೆಗೊಳಿಸಿದೆ.

ಸಾಮಾಜಿಕ ಕಾರ್ಯಕರ್ತರಾದ ಕವಿ ವರವರ ರಾವ್, ಅರುಣ್ ಪೆರೇರಾ, ವರ್ನನ್ ಗೊನ್ಸಾಲ್ವೆಸ್, ಸುಧಾ ಭಾರದ್ವಾಜ್ ಮತ್ತು ಗೌತಮ್ ನವ್‌ಲೇಖಾ ಅವರನ್ನು ಆಗಸ್ಟ್ 29ರಂದು ಬಂಧಿಸಲಾಗಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಬಳಿಕ ಇವರನ್ನು ಗೃಹ ಬಂಧನಕ್ಕೆ ಕಳುಹಿಸಲಾಗಿತ್ತು. ಐವರು ಬಂಧಿತರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂಬ ಕೋರಿಕೆಯನ್ನೂ ಪೀಠವು ತಿರಸ್ಕರಿಸಿತ್ತು.

ಐವರು ಸಾಮಾಜಿಕ ಕಾರ್ಯಕರ್ತರ ಬಂಧನವು ಭಿನ್ನಮತ ಅಥವಾ ಭಿನ್ನ ರಾಜಕೀಯ ಸಿದ್ಧಾಂತವನ್ನು ದಮನ ಮಾಡುವ ಉದ್ದೇಶಕ್ಕಾಗಿ ಮಾಡಿರುವುದಲ್ಲ. ನಿಷೇಧಿತ ಸಂಘಟನೆ ಮತ್ತು ಅದರ ಚಟುವಟಿಕೆಗಳ ಜತೆಗೆ ಅವರು ಹೊಂದಿರುವ ನಂಟಿನ ಕಾರಣಕ್ಕಾಗಿಯೇ ಬಂಧನ ನಡೆದಿದೆ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆಅಭಿಪ್ರಾಯಪಟ್ಟಿತ್ತು.

ಇವನ್ನೂ ಓದಿ...
*‘ನಕ್ಸಲ್ ನಂಟು ಪುರಾವೆ ಉಂಟು’
*ಭೀಮಾ–ಕೋರೆಗಾಂವ್ ಪ್ರಕರಣ: ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ
*ಮೋದಿ ಹತ್ಯೆಗೆ ಸಂಚು: ಕವಿ ವರವರರಾವ್ಬಂಧನ, ವ್ಯಾಪಕ ಟೀಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.