ನವದೆಹಲಿ: ಗುಜರಾತ್ ಅಹಮದಾಬಾದ್ ಪೂರ್ವ ಲೋಕಸಭಾ ಕ್ಷೇತ್ರದಿಂದ ಹಸ್ಮುಖ್ ಎಸ್ ಪಟೇಲ್ ಅವರನ್ನು ಬಿಜೆಪಿ ಕಣಕ್ಕಿಳಿಸುತ್ತಿದೆ. ನಟ, ರಾಜಕಾರಣಿ ಪರೇಶ್ ರಾವಲ್ ಬದಲಾಗಿ ಬಿಜೆಪಿ ಬುಧವಾರ ತನ್ನ ಆಯ್ಕೆ ಪ್ರಕಟಿಸಿದೆ.

ಎಚ್ಎಸ್ ಪಟೇಲ್ ಅವರು 2012 ಹಾಗೂ 2017ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು.

ಅಹಮದಾಬಾದ್‌ಪೂರ್ವ ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾಗಿರುವ ನಟ ಪರೇಶ್ ರಾವಲ್, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ತೀರ್ಮಾನಿಸಿರುವುದಾಗಿ ಹಿಂದೆಯೇ ಘೋಷಿಸಿದ್ದರು.

‘ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ಇಲ್ಲ ಎಂದು ನಾಲ್ಕೈದು ತಿಂಗಳ ಹಿಂದೆಯೇ ಪಕ್ಷಕ್ಕೆ ನಾನು ಮನವರಿಕೆ ಮಾಡಿಕೊಟ್ಟಿದ್ದೆ. ಅಂತಿಮವಾಗಿ ಇದು ಪಕ್ಷದ ನಿರ್ಧಾರ’ ಎಂದು ರಾವತ್ ಹೇಳಿದ್ದಾರೆ.

ಏಪ್ರಿಲ್ 11ರಿಂದ ಲೋಕಸಭಾ ಚುನಾವಣೆ ಪ್ರಾರಂಭವಾಗಲಿದ್ದು, ಏಳು ಹಂತಗಳಲ್ಲಿ ಮೇ 19ರ ವರೆಗೂ ಮುಂದುವರಿಯಲಿದೆ. ಮೇ 23ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.