ನವದೆಹಲಿ: ಚೀನಾ ಗಡಿ ಪ್ರದೇಶದಲ್ಲಿ ಬಿಕ್ಕಟ್ಟು ಎದುರಾಗಿರುವ ಈ ಸಮಯದಲ್ಲಿ ತಕ್ಷಣದ ಅಗತ್ಯಗಳಿಗಾಗಿ ಭಾರತೀಯ ಭದ್ರತಾ ಪಡೆಗಳು 'ಮೇಡ್ ಇನ್ ಇಂಡಿಯಾ' ಕಾರ್ಬೈನ್ಗಳನ್ನು ಪಡೆದುಕೊಳ್ಳಲು ನಿರ್ಧರಿಸಿವೆ.

ಯುದ್ಧ ಸಮಯದಲ್ಲಿ ಸಮೀಪದ ಹೋರಾಟಗಳಲ್ಲಿ ರೈಫಲ್ ರೀತಿಯ ಕಾರ್ಬೈನ್ ಬಳಸಲಾಗುತ್ತದೆ. ರೈಫಲ್ನ ಚಿಕ್ಕ ಮಾದರಿಯಂತೆ ಕಾಣುವ ಕಾರ್ಬೈನ್ಗಳಿಗಾಗಿ ಭಾರತೀಯ ಸೇನೆ ಹಲವು ವರ್ಷಗಳಿಂದ ಎದುರು ನೋಡುತ್ತಿದೆ.

ಭದ್ರತಾ ಪಡೆಗಳಿಗೆ ಒಟ್ಟಾರೆ 3.5 ಲಕ್ಷ ಕಾರ್ಬೈನ್ಗಳ ಅವಶ್ಯಕತೆ ಇದ್ದು, ಚುರುಕು ರಫ್ತು ಪ್ರಕ್ರಿಯೆಗಳ ಮೂಲಕ 94,000 ಶಸ್ತ್ರಗಳನ್ನು ಪಡೆದುಕೊಳ್ಳಲು ಯೋಜಿಸಲಾಗಿದೆ. ಆದರೆ, ರಫ್ತು ಪ್ರಕ್ರಿಯೆ ಫಲಪ್ರದವಾಗುವ ಸಾಧ್ಯತೆಗಳು ಕಡಿಮೆ ಇರುವುದರಿಂದ ದೇಶೀಯ ನಿರ್ಮಿತ ಕಾರ್ಬೈನ್ ಕಡೆಗೆ ಗಮನ ಹರಿಸಲಾಗಿದೆ.

ದೇಶದ ಆಯುಧ ನಿರ್ಮಾಣ ಮಂಡಳಿಯು (ಒಎಫ್ಬಿ) ಪಶ್ಚಿಮ ಬಂಗಾಳದ ಈಶಾಪುರದ ರೈಫಲ್ ಫ್ಯಾಕ್ಟರಿಯಲ್ಲಿ ಸಿದ್ಧಪಡಿಸಲಾಗಿರುವ ಕಾರ್ಬೈನ್ಗಳನ್ನು ಶಸ್ತ್ರಾಸ್ತ್ರ ಪಡೆಗಳಿಗೆ ನೀಡಲಾಗಿದ್ದು, ಅವುಗಳ ಪರೀಕ್ಷೆ ನಡೆಸಲಾಗುತ್ತಿದೆ.

ದೇಶೀಯ ಕಾರ್ಬೈನ್ ಪಡೆದುಕೊಳ್ಳುವ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು, ಬಳಕೆ ಖಚಿತ ಪಟ್ಟರೆ ಅದನ್ನು ಬಹಳಷ್ಟು ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ. ಆರಂಭದಲ್ಲಿ ಭದ್ರತಾ ಪಡೆಗಳಲ್ಲಿ ಸೀಮಿತ ಸಂಖ್ಯೆಯ ಕಾರ್ಬೈನ್ ಬಳಕೆಗೆ ತರಲಾಗುತ್ತದೆ.

2008ರಿಂದಲೂ ಶಸ್ತ್ರಾಸ್ತ್ರ ಪಡೆಗಳಿಗೆ ಸಿಕ್ಯುಬಿ ಕಾರ್ಬೈನ್ಗಳನ್ನು ಪಡೆದುಕೊಳ್ಳುವ ಪ್ರಯತ್ನ ಸಫಲವಾಗಿಲ್ಲ.

ಸಿಗ್ (SIG) ಸಾವುರ್ ರೈಫಲ್ಗಳ ಎರಡನೇ ಬ್ಯಾಚ್ ಬಳಕೆಗೆ ಪಡೆಯಲು ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅನುಮತಿಸಿದೆ. ಪೂರ್ವ ಲಡಾಕ್ನಲ್ಲಿ ಚೀನಾ ಪಡೆಗಳ ಎದುರು ನಿಯೋಜಿಸಲಾಗಿರುವ ಭಾರತದ ಪಡೆಗಳಿಗೆ ಈ ರೈಫಲ್ಗಳನ್ನು ಪೂರೈಸಲಾಗುತ್ತಿದೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.