ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಪಂಜಾಬ್ನ ಹಿರಿಯ ಸಾಹಿತಿ ಮಾಧವ ಕೌಶಿಕ್ ಐದು ವರ್ಷಗಳ ಅವಧಿಗೆ ಶನಿವಾರ ಆಯ್ಕೆಯಾದರು.

ಸಾಹಿತ್ಯ ಅಕಾಡೆಮಿಯಲ್ಲಿ ನಡೆದ ಕಾರ್ಯಕಾರಿ ಚುನಾವಣೆಯಲ್ಲಿ ಕೌಶಿಕ್ ಅವರು ಕನ್ನಡದ ಹಿರಿಯ ವಿದ್ವಾಂಸ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್ ಅವರನ್ನು ಸೋಲಿಸಿದರು. ಚುನಾ ವಣೆಯಲ್ಲಿ 99 ಸದಸ್ಯರು ಮತ ಚಲಾಯಿಸಿದರು. ಮಾಧವ ಕೌಶಿಕ್ ಪರವಾಗಿ 60 ಸದಸ್ಯರು, ಮಲ್ಲೇಪುರಂ ಪರವಾಗಿ 35 ಸದಸ್ಯರು ಮತ ಚಲಾಯಿಸಿದರು. ಕೌಶಿಕ್ ಅವರು ಈವರೆಗೆ ಸಾಹಿತ್ಯ ಅಕಾಡೆಮಿಯ ಉಪಾಧ್ಯಕ್ಷರಾಗಿದ್ದರು. ಕನ್ನಡದ ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಈವರೆಗೆ ಅಧ್ಯಕ್ಷರಾಗಿದ್ದರು.

ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಯಲ್ಲಿ ದೆಹಲಿ ವಿ.ವಿ ಪ್ರಾಧ್ಯಾಪಕಿ ಪ್ರೊ.ಕುಮುದ್ ಶರ್ಮಾ ಒಂದು ಮತದ ಅಂತರದಿಂದ ಜಯಗಳಿಸಿದರು. ಮೊದಲ ಬಾರಿ ಮಹಿಳೆಯೊಬ್ಬರು ಅಕಾಡೆಮಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಕಾಡೆಮಿಯ ಕನ್ನಡ ಸಲಹಾ ಸಮಿತಿ ಸಂಚಾಲಕರಾಗಿ ಸಾಹಿತಿ ಬಸವರಾಜ ಕಲ್ಗುಡಿ ಆಯ್ಕೆಯಾದರು. ಮಂಗಳೂರಿನ ಕೊಂಕಣಿ ಕವಿ, ಭಾಷಾ ಹೋರಾಟಗಾರ ಹಾಗೂ ಕವಿತಾ ಟ್ರಸ್ಟ್ನ ಸ್ಥಾಪಕ ಮೆಲ್ವಿನ್ ರೊಡ್ರಿಗಸ್ ಅವರು ಅಕಾಡೆಮಿಯ ಕೊಂಕಣಿ ಸಲಹಾ ಸಮಿತಿಯ ಸಂಚಾಲಕರಾಗಿ ಚುನಾಯಿತರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.