ಲಖನೌ: ‘ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹಿರಣ್ಯಕಶಿಪುವಿನ ವಂಶಸ್ಥರು’ ಎಂದು ಬಿಜೆಪಿಯ ಸಂಸದ
ಸಾಕ್ಷಿ ಮಹಾರಾಜ್ ಟೀಕಿಸಿದ್ದಾರೆ.

ಉತ್ತರಪ್ರದೇಶದ ಹರಿದ್ವಾರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಅನೌಪಚಾರಿಕ ಮಾತುಕತೆ ನಡೆಸಿದ ಅವರು, ‘ಜೈ ಶ್ರೀರಾಮ್ ಘೋಷಣೆ ಕೂಗಿದವರನ್ನು ಮಮತಾ ಜೈಲಿಗಟ್ಟುತ್ತಾರೆ. ಅವರಿಗೆ ಜೈಲಿನಲ್ಲಿ ಹಿಂಸೆ ನೀಡಲಾಗುತ್ತದೆ. ಇದನ್ನು ನೋಡಿದರೆ ಆಕೆ ಹಿರಣ್ಯಕಶಿಪುವಿನ ವಂಶಸ್ಥೆ ಎಂಬ ಭಾವನೆ ಬರುತ್ತದೆ’ ಎಂದರು.

‘ಹಿರಣ್ಯಕಶಿಪು ದೇವರ ನಾಮ ಸ್ಮರಣೆ ಮಾಡುವವರನ್ನು ಜೈಲಿಗಟ್ಟುತ್ತಿದ್ದ. ತನ್ನ ಪುತ್ರನನ್ನೂ ಆತ ಜೈಲಿಗಟ್ಟಿದ್ದ. ಮಮತಾ ಸಹ ಅದೇ ಕೆಲಸ ಮಾಡುತ್ತಿದ್ದಾರೆ. ಈ ಕೃತ್ಯಕ್ಕೆ ಅವರು ರಾಜಕೀಯವಾಗಿ ಭಾರಿ ಬೆಲೆ ತೆರಬೇಕಾಗುತ್ತದೆ’ ಎಂದು ಹೇಳಿದರು.

ವಿವಾದಕ್ಕೆ ಆಸ್ಪದವಾಗುವ ಹೇಳಿಕೆ ಯನ್ನುಪಕ್ಷದ ಮುಖಂಡರು ನೀಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಈಚೆಗೆ ತಾಕೀತು ಮಾಡಿದ ನಂತರವೂ ಇಂಥ ಹೇಳಿಕೆ ಹೊರಬಿದ್ದಿದೆ.

ಸಾಕ್ಷಿ ಅವರ ಹೇಳಿಕೆಗಳು ವಿವಾದಕ್ಕೆ ಗುರಿಯಾಗುವುದು ಹೊಸದಲ್ಲ. ‘ನನಗೆ ಮತ ನೀಡದಿದ್ದರೆ ಶಾಪಕ್ಕೆ ಗುರಿಯಾಗುತ್ತೀರಿ’ ಎಂದು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅವರು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.