ಕೋಲ್ಕತಾ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೇವರ ಹಾಗೆ. ಅವರು ತಪ್ಪು ಮಾಡಲು ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳದ ಕೃಷಿ ಸಚಿವ ಸೊಭಾನ್ದೇಬ್ ಚಟ್ಟೊಪಾಧ್ಯಾಯ ಹೇಳಿದ್ದಾರೆ.

ಭಾನುವಾರ 24 ಉತ್ತರ ಪರಗಣ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ‘ಮಮತಾ ಬ್ಯಾನರ್ಜಿ ದೇವರ ಹಾಗೆ. ಅವರನ್ನು ನಾವು ಪೂಜಿಸುತ್ತೇವೆ. ದೇವರಿಗೆ ಪೂಜೆ ಸಲ್ಲಿಸುವ ಪೂಜೆ ಸಲ್ಲಿಸುವ ಪುರೋಹಿತರು ಕೆಲವೊಮ್ಮೆ ಕಳ್ಳರಾಗಬಹುದು. ಆದರೆ ದೇವರು ಹಾಗಾಗಲು ಸಾಧ್ಯವಿಲ್ಲ‘ ಎಂದು ಹೇಳಿದ್ದಾರೆ.

‘ಕೆಲವೊಮ್ಮೆ ನಾನು ಕಳ್ಳನಾದರೂ ಮಮತಾ ಬ್ಯಾನರ್ಜಿ ಹಾಗಾಗಲು ಸಾಧ್ಯವಿಲ್ಲ‘ ಎಂದು ಹೇಳಿದ್ದಾರೆ.

ಸಿಪಿಎಂ ಆಡಳಿತ ಅವಧಿಯಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಹಲವಾರು ಅಕ್ರಮಗಳು ನಡೆದಿದೆ ಎಂದು ಇದೇ ವೇಳೆ ಅವರು ಆರೋಪಿಸಿದರು. ಎಡಪಕ್ಷಗಳ ಆಡಳಿತದ ವೇಳೆ ಒಬ್ಬನನ್ನು ರಿಜಿಸ್ಟ್ರಾರ್ ಆಗಿ ನೇಮಕ ಮಾಡಿದ್ದರು, ಆದರೆ ಅವರಿಗೆ ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಶೇ 50ರಷ್ಟು ಅಂಕ ಕೂಡ ಇರಲಿಲ್ಲ ಎಂದು ಚಟ್ಟೊಪಾಧ್ಯಾಯ ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.