ನಂದಿಗ್ರಾಮ: ಪಶ್ಚಿಮ ಬಂಗಾಳದ ಪ್ರತಿಷ್ಠಿತ ಚುನಾವಣಾ ಕಣವಾಗಿರುವ ನಂದಿಗ್ರಾಮವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಅವರು ಬೈಕ್ನಲ್ಲಿ ಮತಗಟ್ಟೆ ಬಳಿ ಬಂದು ಗುರುವಾರ ಮತಚಲಾಯಿಸಿದರು.

ನಂದನಾಯಕ ಬಾರ್ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಬೆಳಿಗ್ಗೆ 7.30ಕ್ಕೆ ಬಂದು ಅವರು ಮತ ಚಲಾವಣೆ ಮಾಡಿದರು. ರಸ್ತೆ ತುಂಬಾ ಕಿರಿದಾಗಿರುವುದರಿಂದ ಕಾರಿನಲ್ಲಿ ಬರಲಾಗದೆ, ಬೈಕ್ನಲ್ಲಿ ಮತದಾನ ಕೇಂದ್ರಕ್ಕೆ ಬಂದಿದ್ದಾಗಿ ಸುವೇಂದು ಸುದ್ದಿಗಾರರಿಗೆ ತಿಳಿಸಿದರು.

‘ನಂದಿಗ್ರಾಮದ ಜನರೊಂದಿಗೆ ನನಗೆ ಹಳೆಯ ಸಂಬಂಧ ಇದೆ. ಇಲ್ಲಿನ ಪ್ರತಿಯೊಬ್ಬ ವ್ಯಕ್ತಿಯ ಪರಿಚಯವೂ ಇದೆ. ಹಾಗಾಗಿ ಇಲ್ಲಿ ನನ್ನ ಗೆಲುವು ನಿಶ್ಚಿತ. ನನ್ನ ಎದುರು ಸ್ಪರ್ಧಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಲುವುದು ಖಚಿತ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕ್ಷೇತ್ರದ ಎಲ್ಲ ಪ್ರಜೆಗಳು ಮತಚಲಾಯಿಸಬೇಕು ಎಂದು ಮನವಿ ಮಾಡಿದ ಅವರು, ಕೆಲ ಬೂತ್ಗಳಲ್ಲಿ ಉಂಟಾಗಿದ್ದ ಸಮಸ್ಯೆಗಳು ನಿವಾರಣೆಯಾಗಿವೆ. ಮತದಾನ ಶಾಂತಿಯುತವಾಗಿ ನಡೆಯುತ್ತಿದೆ. ನಾನು ಕ್ಷೇತ್ರದ ಎಲ್ಲ ಮತಗಟ್ಟೆಗಳ ಬಳಿಗೆ ಹೋಗಲು ಪ್ರಯತ್ನಿಸುತ್ತೇನೆ ಎಂದು ಪ್ರತಿಕ್ರಿಯಿಸಿದರು.

ಎಲ್ಲ ಬೂತ್ಗಳಲ್ಲಿ ಏಜೆಂಟರನ್ನು ನಿಯೋಜಿಸುವಲ್ಲಿ ಟಿಎಂಸಿ ವಿಫಲವಾಗಿದೆ. ಇದು ಮಮತಾ ಬ್ಯಾನರ್ಜಿ ಅವರು ಚುನಾವಣೆಯಲ್ಲಿ ಗೆಲ್ಲುವುದು ಸಾಧ್ಯವಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

ಚುನಾವಣೆ ಘೋಷಣೆಗೂ ಮೊದಲೇ ಸುಮೇಂದು ಇಲ್ಲಿನ ಮತದಾರರಾಗಿ ನೋಂದಾಯಿಸಿದ್ದರು. ಹೀಗಾಗಿ ಇದು ಅವರ ಇಲ್ಲಿನ ಮೊದಲ ಮತದಾನವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.