ಮುಂಬೈ: ಒಂದೆಡೆ ಕಂಡಲ್ಲಿ ಗುಂಡಿಡಲು ಸುಪ್ರೀಂಕೋರ್ಟ್ ಕಟ್ಟಪ್ಪಣೆ, ಮತ್ತೊಂದೆಡೆ ಪ್ರಾಣಿಪ್ರಿಯರ ವಿರೋಧ.13 ಜನರ ಸಾವಿಗೆ ಕಾರಣವಾಗಿದ್ದಾಳೆ ಎಂಬ ಆಪಾದನೆಯನ್ನು ಹೊತ್ತಿದ್ದ ಆಕೆ ಕೊನೆಗೆ ತನ್ನ ಪ್ರಾಣ ಕಳೆದುಕೊಂಡಿದ್ದಾಳೆ.ನರಭಕ್ಷಕ ಹಣೆಪಟ್ಟಿ ಕಟ್ಟಿಕೊಂಡಿದ್ದ ‘ಅವನಿ’ ಹೆಸರಿನ ಹುಲಿ ಗುಂಡೇಟಿಗೆ ಬಲಿಯಾಗಿದ್ದಾಳೆ.

ಶುಕ್ರವಾರ ರಾತ್ರಿ ಯವತಮಾಲ್ ಜಿಲ್ಲೆಯ ಬೊರಟಿ ಅರಣ್ಯ ವ್ಯಾಪ್ತಿಯ ಕಂಪಾರ್ಟ್‌ಮೆಂಟ್ ನಂ.149ರಲ್ಲಿ ಶಾರ್ಪ್ ಶೂಟರ್ ಹುಲಿಯನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅವನಿ ಅಂದರೆ ಸಾಕು,ಪಂಧಾರಕವ್ಡಾ ಅರಣ್ಯ ಪ್ರದೇಶದ ವ್ಯಾಪ್ತಿಯ ಜನರಿಗೆ ಕಳೆದ ಎರಡು ವರ್ಷಗಳಿಂದ ಪ್ರಾಣಭೀತಿ. ಹೀಗಾಗಿ ಕಂಡಲ್ಲಿ ಗುಂಡಿಡುವಂತೆ ಸುಪ್ರೀಂಕೋರ್ಟ್ ಸೆಪ್ಟೆಂಬರ್‌ನಲ್ಲಿ ಆದೇಶಿಸಿತ್ತು. ಇದಕ್ಕೆ ತೀವ್ರ ವಿರೋಧವೂ ವ್ಯಕ್ತವಾಗಿ, ಆನ್‌ಲೈನ್‌ನಲ್ಲಿ ಅಭಿಯಾನ ನಡೆದಿತ್ತು.

ಹುಲಿಯನ್ನು ಜೀವಂತವಾಗಿ ಸೆರೆಹಿಡಿಯುವ ಉದ್ದೇಶವಿತ್ತು. ಆದರೆ ದಟ್ಟವಾದ ಕಾನನ ಹಾಗೂ ಕತ್ತಲು ಕವಿದಿದ್ದರಿಂದ ಅದು ಸಾಧ್ಯವಾಗಲಿಲ್ಲ.

ಅಂಕಿ–ಅಂಶ
*13 -ಎರಡು ತಿಂಗಳಲ್ಲಿ ಅವನಿ ಹುಲಿಯು ಕೊಂದ ಜನರ ಸಂಖ್ಯೆ
*3 ತಿಂಗಳು - ಕಾರ್ಯಾಚರಣೆಗೆ ತೆಗೆದುಕೊಂಡ ಸಮಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.