ಖುಷಿನಗರ (ಉತ್ತರ ಪ್ರದೇಶ): ಪಾಕಿಸ್ತಾನದ ರಾಷ್ಟ್ರಧ್ವಜವನ್ನು ತನ್ನ ಮನೆಯಲ್ಲಿ ಹಾರಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಖುಷಿನಗರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

‘ಖುಷಿನಗರದ ತರಿಯಾ ಸುಜನ್ ಪೊಲೀಸ್ ಠಾಣಾ ವ್ಯಾಪ್ತಿಯ ವೆದುಪರ್ ಮುಸ್ತಾಕಿಲ್ ಗ್ರಾಮದ ಮನೆಯೊಂದರಲ್ಲಿ ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಧ್ವಜಾರೋಹಣ ನಡೆದಿದೆ’ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಿತೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಈ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತ ಕೂಡಲೇ ಧ್ವಜವನ್ನು ತೆಗೆದುಹಾಕಲಾಗಿದೆ ಎಂದು ಅವರು ಹೇಳಿದರು.

ಬಂಧಿತನನ್ನು ಸಲ್ಮಾನ್ (21) ಎಂದು ಗುರುತಿಸಲಾಗಿದೆ. ಧ್ವಜ ತಯಾರಿಸಿದ ಆತನ ಚಿಕ್ಕಮ್ಮ ಶಹನಾಜ್ (22) ವಿರುದ್ಧವೂ ಪ್ರಕರಣ ದಾಖಲಾಗಿದೆ. ಇದಲ್ಲದೇ ಸನ್ಮಾನ್‌ಗೆ ನೆರವು ನೀಡಿದ ಆರೋಪದ ಅಡಿಯಲ್ಲಿ ಆತನ ಸೋದರ ಸಂಬಂಧಿಯ ವಿರುದ್ಧ ಬಾಲಾಪರಾಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇವುಗಳನ್ನೂ ಓದಿ

ಮಧ್ಯಪ್ರದೇಶ: ಮನೆ ಮೇಲೆ ಪಾಕ್ ಧ್ವಜ ಹಾರಿಸಿದ್ದ ವ್ಯಕ್ತಿ ಬಂಧನ

ಕೇರಳ ಮತ್ತು ತುಮಕೂರಿನ ಕಾಂಗ್ರೆಸ್ ರ್ಯಾಲಿಯಲ್ಲಿದ್ದದ್ದು ಪಾಕ್ ಧ್ವಜ ಅಲ್ಲ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.