ಮುಂಬೈ: ಸೆಂಟ್ರಲ್ ಮುಂಬೈನಲ್ಲಿ ಜಾಗತಿಕ ಫ್ಯಾಷನ್ ಬ್ರ್ಯಾಂಡ್ಗಳ ನಕಲಿ ಲೋಗೊ ಅಂಟಿಸಿ ಜೀನ್ಸ್ ಹಾಗೂ ಇನ್ನಿತರ ಬಟ್ಟೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ 36 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಧಾರಾವಿಯ ಕುಂಭಾರ್ವಾಡದಲ್ಲಿ ವ್ಯಕ್ತಿಯೊಬ್ಬರು ನಕಲಿ ಬಟ್ಟೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ಬಂದಿತ್ತು. ಇದಾದ ಬಳಿಕ, ಆರೋಪಿ ಬ್ರಿಜೇಶ್ ಕುಮಾರ್ ರಾಜ್ನಾರಾಯಣ್ಗೆ ಸೇರಿದ ಸ್ಥಳದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.

ದಾಳಿ ವೇಳೆ 355 ಜೊತೆ ಜೀನ್ಸ್ಗಳು, ಟ್ಯಾಗ್ಗಳು, ಲೇಬಲ್ಗಳು, ಹೊಲಿಗೆ ಯಂತ್ರಗಳು ಹಾಗೂ ‘ಝಾರಾ’ದ ಲೋಗೊ ಇರುವ ಬಟನ್ಗಳು ಸೇರಿ ಒಟ್ಟು ₹5.5 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಯ ಮೇಲೆ ಕಾಪಿರೈಟ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.