ನವದೆಹಲಿ: ಮಣಿಪುರದಲ್ಲಿನ ಹಿಂಸಾಚಾರದ ಬಗ್ಗೆ ಸದನದಲ್ಲಿ ಚರ್ಚೆ ನಡೆಸುವ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ಶುಕ್ರವಾರ ಟಿಎಂಸಿ ಸದಸ್ಯ ಡೆರಿಕ್ ಒಬ್ರಿಯಾನ್ ಮತ್ತು ಸಭಾಪತಿ ಜಗದೀಪ್ ಧನಕರ್ ನಡುವೆ ಮಾತಿನ ಚಕಮಕಿ ನಡೆಯಿತು.

ನಿಯಮ 267ರ ಅಡಿಯಲ್ಲಿ ಮಣಿಪುರದಲ್ಲಿನ ಪರಿಸ್ಥಿತಿಯ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ವಿರೋಧ ಪಕ್ಷಗಳ ಸದಸ್ಯರು ನೀಡಿದ ನೋಟಿಸ್ ಸ್ವೀಕರಿಸದಿರುವ ಬಗ್ಗೆ ಪ್ರಸ್ತಾಪಿಸುವಾಗ ಒಬ್ರಿಯಾನ್ ಅವರು ಮೇಜು ಕುಟ್ಟಿ, ಸಭಾಪತಿ ಅವರೊಂದಿಗೆ ವಾಗ್ವಾದಕ್ಕೆ ಇಳಿದರು. ಇದರಿಂದ ವಿಚಲಿತರಾದಂತೆ ಕಂಡುಬಂದ ಧನಕರ್ ಅವರು ‘ನಿಮ್ಮ ವರ್ತನೆ ನಾಟಕೀಯವಾಗಿದೆ. ಇದನ್ನು ಸಹಿಸಲಾಗದು’ ಎಂದು ಹೇಳಿ, ಕಲಾಪವನ್ನು ಹಠಾತ್ತನೆ ಸೋಮವಾರಕ್ಕೆ ಮುಂದೂಡಿದರು.

ಕಾಂಗ್ರೆಸ್, ಎಡಪಕ್ಷಗಳು, ಟಿಎಂಸಿ, ಎಸ್‌ಪಿ, ಎಎಪಿ, ಎನ್‌ಸಿಪಿ ಮತ್ತು ಡಿಎಂಕೆ ಸೇರಿದಂತೆ ವಿರೋಧ ಪಕ್ಷಗಳ 47 ಸಂಸದರು ಶುಕ್ರವಾರ ನೋಟಿಸ್ ನೀಡಿದ್ದರು. ಪಟ್ಟಿ ಮಾಡಿರುವ ವಿಷಯಗಳನ್ನು ಬದಿಗಿರಿಸಿ, ಮಣಿಪುರ ವಿಷಯ ಚರ್ಚೆಗೆ ಕೈಗೆತ್ತಿಕೊಳ್ಳಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.