ನವದೆಹಲಿ: ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಜಗದೀಪ್ ಧನಕರ್ ದೇಶದ 14ನೇ ರಾಜ್ಯಪಾಲರಾಗಿ ಆಯ್ಕೆಯಾಗಿದ್ದಾರೆ. ಪ್ರತಿಪಕ್ಷಗಳ ಅಭ್ಯರ್ಥಿ ಮಾರ್ಗರೇಟ್ ಆಳ್ವಾ ಅವರಿಗಿಂತ 346 ಮತಗಳನ್ನು ಹೆಚ್ಚು ಪಡೆದಿದ್ದಾರೆ. ಜಗದೀಪ್ ಧನಕರ್ 528 ಮತ ಪಡೆದರೆ, ಮಾರ್ಗರೇಟ್ ಆಳ್ವಾ 182 ಮತ ಪಡೆದರು.

ಧನಕರ್ ಕುರಿತಾದ 10 ಮಾಹಿತಿ

* ವೃತ್ತಿಯಲ್ಲಿ ವಕೀಲರಾಗಿದ್ದ ಜಗದೀಪ್ ಧನಕರ್, 1989ರಲ್ಲಿ ರಾಜಕೀಯಕ್ಕೆ ಸೇರಿದ್ದರು.

* ಮೇ 18, 1951ರಲ್ಲಿ ರಾಜಸ್ಥಾನದ ಝುಂಝುನು ಜಿಲ್ಲೆಯ ಕುಗ್ರಾಮದ ಕೃಷಿಕ ಕುಟುಂಬದಲ್ಲಿ ಧನಕರ್ ಜನಿಸಿದರು.

* ರಾಜಸ್ಥಾನದ ಪ್ರಮುಖ ವಕೀಲರಾಗಿದ್ದ ಧನಕರ್ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಸೇವೆ ಸಲ್ಲಿಸಿದ್ಧಾರೆ. ರಾಜಸ್ಥಾನದ ಬಾರ್ ಕೌನ್ಸಿಲ್ ಸಂಘದ ಅಧ್ಯಕ್ಷರಾಗಿಯೂ ಕೆಲಸ ನಿರ್ವಹಿಸಿದ್ದಾರೆ.

* 1989ರಲ್ಲಿ ರಾಜಸ್ಥಾನದ ಝುಂಝುನು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.

* ಪ್ರಧಾನಿ ಚಂದ್ರಶೇಖರ್ ನೇತೃತ್ವದ ಜನತಾ ದಳದ ಸರ್ಕಾರದಲ್ಲಿ ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

* 1993–1998ರ ನಡುವೆ ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಕಿಶಾನ್‌ಗರ್ಗ್ ಕ್ಷೇತ್ರದ ಶಾಸಕರಾಗಿದ್ದರು.

* ಮೊದಲಿಗೆ ಜನತಾ ದಳ, ಬಳಿಕ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದ ಧನಕರ್, ಸರಿ ಸುಮಾರು ದಶಕದ ಕಾಲ ರಾಜಕೀಯದಿಂದ ಹೊರಗಿದ್ದು, 2008ರಲ್ಲಿ ಬಿಜೆಪಿ ಸೇರಿದ್ದರು.

* ರಾಜಸ್ಥಾನದಲ್ಲಿ ಜಾಟ್ ಸಮುದಾಯಕ್ಕೆ ಒಬಿಸಿ ಸ್ಥಾನಮಾನ ನೀಡುವುದು ಸೇರಿದಂತೆ ಇತರೆ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಗೆ ಹೋರಾಟ ನಡೆಸಿದ್ದರು.

* ಜುಲೈ, 2019ರಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ನೇಮಕವಾದ ಧನಕರ್ ಅವರು, ಅಂದಿನಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೊತೆಗಿನ ತಿಕ್ಕಾಟದ ಮೂಲಕವೇ ಸುದ್ದಿಯಾಗಿದ್ದರು.

*ಬಿಜೆಪಿ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ ಎಂದು ಟಿಎಂಸಿ ನಾಯಕರು ಆಗಾಗ್ಗೆ ಧನಕರ್ ವಿರುದ್ಧ ಆರೋಪ ಮಾಡುತ್ತಲೇ ಇದ್ದರು. ಆದರೆ, ಸಂವಿಧಾನಬದ್ಧವಾಗಿ ವರ್ತಿಸುತ್ತಿರುವುದಾಗಿ ಧನಕರ್ ಸಮರ್ಥಿಸಿಕೊಂಡಿದ್ದರು. ಕಳೆದ ತಿಂಗಳು ಅವರು ರಾಜ್ಯಪಾಲ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.