ಕೋಲ್ಕತ್ತ: ಈ ದೇಶದಲ್ಲಿ ಯಾರೂ ಒಡೆಯರಲ್ಲ. ಇಲ್ಲಿ ಜನರೇ ಪ್ರಭುಗಳು ಎಂದು ಕೋಲ್ಕತ್ತ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ನಮ್ಮ ಚಳವಳಿ ಜನರ ಚಳವಳಿ.ಮೋದಿ ಮತ್ತೊಮ್ಮೆ ಅಧಿಕಾರಕ್ಕೇರುವುದಿಲ್ಲ. ಅವರು ಸಾಮಾನ್ಯ ವ್ಯಕ್ತಿ, ರೈತರು, ಕಲಾವಿದರು ಹೀಗೆ ಎಲ್ಲರಿಗೂ ತೊಂದರೆ ಕೊಡುತ್ತಿದ್ದಾರೆ. ನಾವು ಸಾಕ್ಷ್ಯ ನಾಶ ಮಾಡಿದ್ದೇವೆ ಎಂದು ಅವರು ಆರೋಪಿಸಿದ್ದು ಇದೀಗ ಅದು ಅವರಿಗೆ ತಿರುಗು ಬಾಣವಾಗಿದೆ.

ಇದನ್ನೂ ಓದಿ:ಕೋಲ್ಕತ್ತ ಪೊಲೀಸ್ ಆಯುಕ್ತರನ್ನು ವಿಚಾರಣೆ ಮಾಡಬಹುದು, ಬಂಧಿಸುವಂತಿಲ್ಲ: ಸುಪ್ರೀಂ

ರಾಜೀವ್ ಕುಮಾರ್ ಅವರನ್ನು ಬಂಧಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.ಬಂಗಾಳದ ಜನರನ್ನು ಬಂಧಿಸಿ ಅವರು ಒಡಿಶಾದ ಜೈಲಿನಲ್ಲಿಡುತ್ತಾರೆ.ಕೆಲವರನ್ನು ದೆಹಲಿಗೆ ಇನ್ನು ಕೆಲವರನ್ನು ಒಡಿಶಾಗೆ ಕಳುಹಿಸುತ್ತಾರೆ.

ಅವರು ಲಾಲು ಪ್ರಸಾದ್ ಯಾದವ್ನ್ನುಬಂಧಿಸಿ ಜಾರ್ಖಂಡ್ನಲ್ಲಿಟ್ಟಿದ್ದರು. ಸುಪ್ರೀಂಕೋರ್ಟ್ತೀರ್ಪು ಪ್ರಜಾಪ್ರಭುತ್ವದ ಗೆಲುವು.

ಶಾರದಾ ಚಿಟ್ ಫಂಡ್ ಪ್ರಕರಣ 6 ವರ್ಷ ಹಳೆಯದ್ದು.ಸಿಪಿಐ (ಎಂ) ಅಧಿಕಾರವಧಿಯಲ್ಲಿ ಇದು ನಡೆದಿತ್ತು. ನಾವುಸುದಿಪ್ತಾ ಸೇನ್ನ್ನು ಬಂಧಿಸಿದ್ದೆವು.ನಾವು ನ್ಯಾಯಾಂಗ ಆಯೋಗವನ್ನು ರಚಿಸಿದ್ದು, ₹300ಕೋಟಿ ವಾಪಸ್ ಮಾಡಿದ್ದೇವೆ.ಆದರೆ ಅವರು ನಮ್ಮ ಮೇಲೆಯೇ ಆರೋಪ ಹೊರಿಸುತ್ತಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪನ್ನು ಮಮತಾ ವಿವರಿಸಿದ್ದು ಹೀಗೆ
* ನಾವು ನ್ಯಾಯಾಂಗ ನಿಂದನೆ ಮಾಡಿದ್ದೇವೆ ಎಂದು ಅವರು ಆರೋಪಿಸಿದರು. ಅದು ತಿರಸ್ಕೃತವಾಯಿತು,
* ರಾಜೀವ್ ಕುಮಾರ್ ವಿರುದ್ಧ ಅವರು ಹಲವಾರು ಆರೋಪಗಳನ್ನು ಮಾಡಿದರು- ಅದೂ ತಿರಸ್ಕೃತವಾಯಿತು
* ಇಬ್ಬರಿಗೂ ಒಪ್ಪಿಗೆಯಾದ ಸ್ಥಳದಲ್ಲಿ ಚರ್ಚೆಯಾಗಬೇಕು.ಇದನ್ನು ನಾವು ಮೊದಲೇ ಹೇಳಿದ್ದೆವು.ನಾವು ಐದು ಪತ್ರಗಳನ್ನು ಕಳಿಸಿದ್ದರೂ ಒಂದೇ ಒಂದು ಪತ್ರಕ್ಕೆ ಅವರು ಉತ್ತರಿಸಿಲ್ಲ.
* ರಾಜೀವ್ ಕುಮಾರ್ ಅವರನ್ನು ಬಂಧಿಸುವಂತಿಲ್ಲ

ಗನ್ ಮತ್ತು ಗೋರಕ್ಷಕರಿಂದ ದೇಶ ನಡೆಯಲಾರದು
ಕೋಲ್ಕತ್ತ ಪೊಲೀಸ್ ಆಯುಕ್ತರ ಈ ಜಟಾಪಟಿ ಬೇರೇನೂ ಅಲ್ಲ ರಾಜಕೀಯ ಸೇಡು. ನಾವು ಯಾವುದೇ ತನಿಖಾ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಅಲ್ಲ.ಅವರು ನಮ್ಮ ಸಹೋದರ ಸಹೋದರಿಯರು. ಅವರನ್ನು ರಾಜಕೀಯವಾಗಿ ಬಳಸಬಾರದು.
ಮೋದಿ ಅವರು ಮತ್ತೊಮ್ಮೆಅಧಿಕಾರಕ್ಕೇರುವುದಿಲ್ಲ ಎಂಬ ಸಂದೇಶ ಈ ಮೂಲಕ ಸಿಕ್ಕಿದೆ.ಈ ದೇಶ ಗನ್ ಮತ್ತು ಗೋರಕ್ಷಕರಿಂದ ನಡೆಯಲಾರದು.ಇದು ಸಂವಿಧಾನದ ಸಹಾಯದಿಂದ ನಡೆಯುತ್ತದೆ.

ನಾನು ಈ ಧರಣಿ ಮುಂದುವರಿಸಬೇಕಾದರೆ ಇತರ ನಾಯಕರನ್ನೂ ಭೇಟಿ ಮಾಡುವೆ.ಇದು ಟಿಎಂಸಿ ಧರಣಿ ಅಲ್ಲ, ಇದು ಸಂವಿಧಾನ ಕಾಪಾಡಲು ಇರುವ ಧರಣಿ.
ಹಲವಾರು ಮಂದಿ ಚಿಟ್ ಫಂಡ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಅಸ್ಸಾಂನ ಉಪ ಮುಖ್ಯಮಂತ್ರಿಗಳು ಕೂಡಾ ಹಗರಣದಲ್ಲಿದ್ದಾರೆ. ಅವರು ₹3 ಕೋಟಿ ಪಡೆದಿದ್ದರು.ಅವರನ್ನು ಬಂಧಿಸಲಾಗಿದೆಯೇ?
ಬಾಬುಲ್ ಸುಪ್ರಿಯೋ ತಾನು ರೋಸ್ ವ್ಯಾಲಿ ಗ್ರೂಪ್ನ ರೋಸ್ ಎಂದಿದ್ದರು. ಅವರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರೀ?
ಚುನಾವಣೆಗೆ ಖರ್ಚು ಮಾಡಲು ನಾನು ಪೇಟಿಂಗ್ ಮಾರಿದೆ. ನಾಳೆ ನಾನು ಅನ್ನ ತಿಂದರೆ, ಚಪ್ಪಲಿ ತೊಟ್ಟರೆ ಸಿಬಿಐ ದಾಳಿ ಮಾಡಬಹುದು ಎಂದು ಮಮತಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.