ಮುಂಬೈ: ಎನ್‌ಐಎ ನಡೆಸುತ್ತಿರುವ ‘ಸ್ಕಾರ್ಪಿಯೊ ವಾಹನದಲ್ಲಿ ಸ್ಪೋಟಕಗಳು ತುಂಬಿದ್ದ ಪ್ರಕರಣ‘ದ ತನಿಖೆಗೆ ಪೂರ್ಣ ಸಹಕಾರ ನೀಡುವುದಾಗಿ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಬಳಸುತ್ತಿದ್ದ ಮರ್ಸಿಡಿಸ್ ಕಾರಿನ ಹಿಂದಿನ ಮಾಲೀಕರು ತಿಳಿಸಿದ್ದಾರೆ.

ವಾಜೆ ಬಳಸುತ್ತಿದ್ದ ಮರ್ಸಿಡಿಸ್ ಕಾರಿನ ಹಿಂದಿನ ಮಾಲೀಕ ಮಹಾರಾಷ್ಟ್ರದ ಧುಲೆ ಜಿಲ್ಲೆಯ ಸರನಾಶ್ ಭಾವ್ಸಾರ್. ‘ನಾನು ಕಳೆದ ತಿಂಗಳು ಈ ವಾಹನವನ್ನು ಆನ್‌ಲೈನ್ ಜಾಲತಾಣದ ಮೂಲಕ ಮಾರಾಟ ಮಾಡಿದ್ದೆ. ಆದರೆ ಯಾರು ಈ ವಾಹನ ಖರೀದಿಸಿದ್ದಾರೆಂದು ಗೊತ್ತಿಲ್ಲ‘ ಎಂದು ಭಾವ್ಸಾರ್ ಟಿವಿ ವಾಹನಿಯೊಂದಕ್ಕೆ ಹೇಳಿಕೆ ನೀಡಿದ್ದಾರೆ.

‘ನನಗೆ ಸಚಿನ್ ವಾಜೆ ಯಾರು ಅಂತ ಗೊತ್ತಿಲ್ಲ. ಮಂಗಳವಾರ ಅವರ ಹೆಸರನ್ನು ಕೇಳಿದ ನಂತರವೇ, ಈ ಪ್ರಕರಣದ ವಿಚಾರ ಗೊತ್ತಾಯಿತು‘ ಎಂದು ಭಾವ್ಸಾರ್ ಹೇಳಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳಾಗಲೀ ಅಥವಾ ಪೊಲೀಸರಾಗಲೀ ಭಾವ್ಸಾರ್ ಅವರನ್ನು ಇಲ್ಲಿವರೆಗೂ ಸಂಪರ್ಕಿಸಿಲ್ಲ.‘ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ, ತಾನು ಈ ಪ್ರಕರಣದ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಈಗಾಗಲೇ ಮಾರಾಟವಾಗಿರುವ ಕಾರಿಗೆ ಸಂಬಂಧಿಸಿದ ಅಗತ್ಯ ಮಾಹಿತಿ ಮತ್ತು ದಾಖಲೆಗಳನ್ನು ನೀಡುತ್ತೇನೆ‘ ಎಂದು ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.