ನವದೆಹಲಿ: ''ರಾಜಕೀಯ ಸೇರಿದರೆ ನಿನ್ನ ಜತೆ ಇರುವುದಿಲ್ಲ ಎಂದಿದ್ದಾಳೆ ನನ್ನ ಪತ್ನಿ. ಎಲ್ಲ ಕಡೆ ರಾಜಕೀಯ ಒಂದೇ ರೀತಿ ಇರುತ್ತದೆ. ರಾಜಕೀಯ ಸದ್ದು ಮಾಡಲಿ,ಇಲ್ಲದಿರಲಿ ಅದರ ಬಗ್ಗೆ ನನಗೆ ಆಸಕ್ತಿ ಇಲ್ಲ.ಬೇರೆ ಯಾರಾದರೂ ಭಾಷಣ ಮಾಡಿ ಮತ ಪಡೆಯಲಿ'' ಎಂದಿದ್ದಾರೆ ಆರ್‌ಬಿಐ ಮಾಜಿ ಗವರ್ನರ್ ರಘುರಾಂ ರಾಜನ್.

ಮಿಂಟ್‍ಗೆ ನೀಡಿದ ಸಂದರ್ಶನದಲ್ಲಿ ನೀವು ರಾಜಕೀಯ ಸೇರುತ್ತೀರಾ? ಎಂಬ ಪ್ರಶ್ನೆಗೆ ರಘುರಾಂ ರಾಜನ್ಈ ರೀತಿ ಉತ್ತರಿಸಿದ್ದಾರೆ.

ಸಂದರ್ಶನದ ಕೆಲವು ಆಯ್ದ ಭಾಗಗಳು ಇಲ್ಲಿವೆ
ಪ್ರಶ್ನೆ: ನೀವು ಯಾವುದಾದರೂ ರಾಜಕೀಯ ಪಕ್ಷ ಆರಂಭಿಸುತ್ತೀರಾ?

ಉತ್ತರ: ಉತ್ತರ ಸರಳ. ನಾನು ಯಾವುದೇ ಪಕ್ಷ ಆರಂಭಿಸುವುದಿಲ್ಲ. ನನ್ನ ಬರವಣಿಗೆಯಲ್ಲಿಯೂ ನೀವು ನೋಡಬಹುದು, ನಿಮಗೆ ನನ್ನ ನಿಲುವು ಗೊತ್ತು. ನನಗೆ ರಾಜಕಾರಣದಲ್ಲಿ ಯಾವುದೇ ಆಸಕ್ತಿ ಇಲ್ಲ. ಅಂದ ಹಾಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರಿದರೆ ನಿಮ್ಮನ್ನು ಸಚಿವರಾಗಿ ಮಾಡುತ್ತಾರಂತೆ ಎಂಬ ವದಂತಿ ಬಗ್ಗೆ ಕೇಳಿದಾಗ, ನಾನು ಈಗ ಇರುವಲ್ಲಿಯೇ ಖುಷಿಯಾಗಿ ಇದ್ದೇನೆ.

ಇನ್ನೂ ತುಂಬಾ ಮುಂದೆ ಸಾಗುವುದಿದೆ. ನನ್ನ ಮೊದಲ ಕೆಲಸ ಶೈಕ್ಷಣಿಕ ಕೆಲಸ ಆಗಿರಲಿಲ್ಲ, ನನಗೆ ಆ ಕೆಲಸ ಇಷ್ಟ.ನಾನು ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದೇನೆ, ನಾನು ಇತ್ತೀಚೆಗೆ ದಿ ಥರ್ಡ್ ಪಿಲ್ಲರ್ ಎಂಬ ಪುಸ್ತಕ ಬರೆದಿದ್ದೇನೆ. ಅದು ಬೌದ್ದಿಕ ಮತ್ತು ಚರ್ಚಾಸ್ಪದ ಆಗಿತ್ತು.ಇದನ್ನೆಲ್ಲಾ ನೋಡಿದಾಗ ನಾನು ಎಲ್ಲಿದ್ದೇನೋ ಅಲ್ಲಿ ಖುಷಿಯಾಗಿದ್ದೇನೆ. ನಾನು ಸಮರ್ಥ ರೀತಿಯಲ್ಲಿ ನೆರವಾಗಬಲ್ಲೆ.ಕೆಲವೊಮ್ಮೆ ಜನರಿಗೆ ಸಲಹೆಗಳು ಬೇಕಾಗುತ್ತದೆ, ನನಗಿದು ಖುಷಿ ಕೊಡುವ ವಿಷಯ.

ಈಗ ಅಧಿಕಾರ ಮುಗಿಸಿ ಹೊರಹೋಗುತ್ತಿರುವ ಸರ್ಕಾರದ ಬಗ್ಗೆ?
ಇದರ ಬಗ್ಗೆ ಒಟ್ಟು ಅಭಿಪ್ರಾಯ ಹೇಳಲು ಮಾಹಿತಿ ಬೇಕಾಗುತ್ತದೆ.ಸರ್ಕಾರದ ಕೆಲಸ ನಿರ್ವಹಣೆ ಸಾಧಾರಣವಾಗಿತ್ತು. ಶೇ. 7 ಅಭಿವೃದ್ಧಿ ಒಳ್ಳೆಯದೇ. ಉದ್ಯೋಗ ಅಥವಾ ನಿರುದ್ಯೋಗ ಇದ್ದು ಶೇ.7 ಅಭಿವೃದ್ಧಿ ಸಾಧಿಸಿದರೇ? ಎಂಬುದು ಇನ್ನೊಂದು ಪ್ರಶ್ನೆ.ಮುಂದಿನ ದಿನಗಳಿಗಾಗಿ ನೀವು ಆರ್ಥಿಕ ಚೌಕಟ್ಟು ಬದಲಿಸಿದ್ದೀರಾ ಎಂದು ಕೇಳಿದರೆ ನನ್ನ ಉತ್ತರ ಇಲ್ಲ ಎಂದಾಗಿರುತ್ತದೆ.ಇಲ್ಲಿಯವರೆಗೆ ಆದ ಪರಿಷ್ಕರಣೆಗಳಲ್ಲಿ ನಿರಂತರತೆ ಇರುತ್ತದೆ, ಹಾಗಾದರೆ ಇದು ಒಳ್ಳೆಯದೇ? ಎಂಬ ಪ್ರಶ್ನೆ ಮತ್ತೆ ಎದುರಾಗುತ್ತದೆ. ಅದು ಹಿಂದಕ್ಕೆ ಹೋಗಬಹುದು. ಆದರೆ ಅದನ್ನು ಸರಾಸರಿ ಮಟ್ಟದಲ್ಲಿ ನಿಲ್ಲಿಸಬಹುದಲ್ಲವೇ?.ಇಲ್ಲಿರುವ ಉದ್ಯೋಗ ಪರಿಸ್ಥಿತಿ ಬಗ್ಗೆ ನೋಡಿದರೆ ನಾವು ಅದನ್ನು ಪುನಃ ಸಿದ್ಧಗೊಳಿಸಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.