ಮುಂಬೈ: ನೌಕಾಪಡೆಯ 26 ವರ್ಷದ ನಾವಿಕರೊಬ್ಬರು ಮುಂಬೈನಲ್ಲಿ ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ದಕ್ಷಿಣ ಮುಂಬೈನಲ್ಲಿರುವ ನೌಕಾನೆಲೆಯಲ್ಲಿ ನಾವಿಕರಾಗಿ ನೇಮಕಗೊಂಡಿದ್ದ ಛತ್ತೀಸಗಢ ಮೂಲದ ದಾನೇಶ್ವರ ಸಾಹೂ ನಾಪತ್ತೆಯಾದವರು. ಈ ಬಗ್ಗೆ ಅವರ ಕುಟುಂಬ ಸದಸ್ಯರು ಆಗಸ್ಟ್ 28 ರಂದು ಇಲ್ಲಿನ ಕೊಲಾಬಾ ಪೊಲೀಸರಿಗೆ ದೂರು ನೀಡಿದ್ದಾರೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಜುಲೈ 19 ರಿಂದ ಕೊಲಾಬಾದ ಐಎನ್‌ಎಚ್‌ಎಸ್ ಅಶ್ವಿನಿ ಆಸ್ಪತ್ರೆಗೆ ದಾಖಲಾಗಿದ್ದ ಸಾಹೂ, ಚಿಕಿತ್ಸೆ ಬಳಿಕ ಆ. 21 ರಂದು ಡಿಸ್ಚಾರ್ಜ್ ಆಗಿದ್ದರು. ಆ. 23ರಂದು ಅವರು ಕರ್ತವ್ಯಕ್ಕೆ ಹಾಜರಾಗಬೇಕಾಗಿತ್ತು. ಆದರೆ, ಸಾಹೂ ಕೆಲಸಕ್ಕೆ ಹಾಜರಾಗಿಲ್ಲ ಎಂದು ನೌಕಾಪಡೆಯ ಅಧಿಕಾರಿಗಳು ಕುಟುಂಬಸ್ಥರಿಗೆ ಕರೆ ಮಾಡಿ ತಿಳಿಸಿದ್ದರು. ಆ. 28ರಂದು ಈ ಬಗ್ಗೆ ಪೋಷಕರು ಪ್ರಕರಣ ದಾಖಲಿಸಿದ್ದಾರೆ. ಪತ್ತೆ ಕಾರ್ಯ ನಡೆಯುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.