ಲಖನೌ: 2006ರ ರೈಲ್ವೆ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷದ (ಎಸ್ಬಿಎಸ್ಪಿ) ಶಾಸಕ ಬೇಡಿ ರಾಮ್ ಮತ್ತು ನಿಶಾದ್ ಪಕ್ಷದ ಶಾಸಕ ವಿಫುಲ್ ದುಬೆ ಅವರ ವಿರುದ್ಧ ಇಲ್ಲಿನ ವಿಶೇಷ ನ್ಯಾಯಾಲಯ ಜಾಮೀನು ರಹಿತ ವಾರಂಟ್ (ಎನ್ಬಿಡಬ್ಲ್ಯು) ಹೊರಡಿಸಿದೆ.

ಈ ಎರಡೂ ಪಕ್ಷಗಳು ಉತ್ತರ ಪ್ರದೇಶದ ಆಡಳಿತಾರೂಢ ಬಿಜೆಪಿಯ ಮೈತ್ರಿಕೂಟದ ಪಾಲುದಾರ ಪಕ್ಷಗಳಾಗಿವೆ. ವಿಶೇಷ ನ್ಯಾಯಾಧೀಶ ಪುಷ್ಕರ್ ಉಪಾಧ್ಯಾಯ ಅವರು ಇಬ್ಬರೂ ಶಾಸಕರ ವಿರುದ್ಧ ಎನ್ಬಿಡಬ್ಲ್ಯು ಹೊರಡಿಸಿದ್ದಾರೆ.

ಬೇಡಿ ರಾಮ್ ಅವರು ವಿವಿಧ ರಾಜ್ಯಗಳಲ್ಲಿನ ಸರ್ಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ನೇಮಕಾತಿಗಾಗಿ ಹಣ ಪಡೆದುಕೊಂಡಿರುವುದನ್ನು ಒಪ್ಪಿಕೊಂಡಿದ್ದ ವಿಡಿಯೊ ಕೆಲ ದಿನಗಳ ಹಿಂದೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿತ್ತು.

ನಿಶಾದ್ ಪಕ್ಷದ ಶಾಸಕ ವಿಫುಲ್ ದುಬೆ ಮತ್ತು ಇತರರಿಗೆ ಹಲವು ಬಾರಿ ಸಮನ್ಸ್ ನೀಡಲಾಗಿದ್ದರೂ, ಅವರು ನ್ಯಾಯಾಲಯದ ಮುಂದೆ ಹಾಜರಾಗಿರಲಿಲ್ಲ.

ಬೇಡಿ ರಾಮ್ ಅವರು ಗಾಜಿಪುರ ಜಿಲ್ಲೆಯ ಜಖನಿಯ ಶಾಸಕ ಹಾಗೂ ವಿಫುಲ್ ಅವರು ಭದೋಹಿ ಜಿಲ್ಲೆಯ ಜ್ಞಾನಪುರದ ಶಾಸಕರು. ಈ ಇಬ್ಬರು ಶಾಸಕರು ಮತ್ತು ಪ್ರಕರಣದ ಇತರ ಆರೋಪಿಗಳನ್ನು ಇದೇ 26ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.