ನವದೆಹಲಿ: ಗೋದ್ರೆಜ್ ಪ್ರಾಪರ್ಟಿಸ್ ಲಿ. ಮತ್ತು ವಂಡರ್ ಪ್ರಾಜೆಕ್ಟ್ಸ್ ಡೆವಲಪ್‌ಮೆಂಟ್ ಪ್ರೈ.ಲಿ. ಬೆಂಗಳೂರಿನಲ್ಲಿ ಅಭಿವೃದ್ಧಿಪಡಿಸಿರುವ ಐಷಾರಾಮಿ, ಬಹುಮಹಡಿ ಕಟ್ಟಡಕ್ಕೆ ನೀಡಲಾಗಿದ್ದ ಪರಿಸರ ಅನುಮೋದನೆಯನ್ನು ರಾಷ್ಟ್ರೀಯ ಹಸಿರು ಪೀಠವು (ಎನ್‌ಜಿಟಿ) ಶುಕ್ರವಾರ ರದ್ದುಪಡಿಸಿದೆ. ಈ ಕಟ್ಟಡವನ್ನು ತಕ್ಷಣವೇ ಕೆಡವಲು ಆದೇಶಿಸಿದೆ.

ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಿದ ಕಂಪನಿಗಳಿಗೆ ₹31 ಕೋಟಿ ದಂಡವನ್ನೂ ವಿಧಿಸಲಾಗಿದೆ. ಕಟ್ಟಡವನ್ನು ಕೆಡವಲು, ಈ ಪ್ರದೇಶವು ಮೂಲದಲ್ಲಿ ಹೇಗಿತ್ತೋ ಅದೇ ಸ್ಥಿತಿ ಮರುಸ್ಥಾಪಿಸಲು,ಕೈಕೊಂಡನಹಳ್ಳಿ ಕೆರೆಯ ಪ್ರದೇಶದ ಪುನಶ್ಚೇತನ ಮತ್ತು ಅರಣ್ಯೀಕರಣಕ್ಕೆ ಈ ಮೊತ್ತವನ್ನು ಬಳಸಬೇಕು ಎಂದು ಪೀಠವು ಸೂಚಿಸಿದೆ.

ಅಪಾರ್ಟ್‌ಮೆಂಟ್ ಯೋಜನೆ ಯನ್ನು ಕೈಗೆತ್ತಿಕೊಳ್ಳಲಾದ ಜಾಗದ ಮಧ್ಯದಲ್ಲಿದ್ದ ಮಳೆ ನೀರು ಚರಂಡಿಯ ದಿಕ್ಕು ಬದಲಿಸಲು ಅನುಮತಿ ನೀಡಿದ ಬೃಹತ್ ಬೆಂಗಳೂರು ಮಹಾನಗರಪಾಲಿಕೆಗೆ (ಬಿಬಿಎಂಪಿ) ₹10 ಲಕ್ಷ ದಂಡ ವಿಧಿಸಲಾಗಿದೆ.

2018ರ ಜನವರಿ 10ರಂದು ಯೋಜನೆಗೆ ಪರಿಸರ ಅನುಮತಿ ನೀಡಲಾಗಿತ್ತು. ಆ ಅನುಮತಿ ಈಗ ರದ್ದಾಗಿದೆ ಎಂದು ಎನ್‌ಜಿಟಿ ಮುಖ್ಯಸ್ಥ ನ್ಯಾಯಮೂರ್ತಿ ಆದರ್ಶಕುಮಾರ್ ಗೋಯಲ್ ನೇತೃತ್ವದ ಪೀಠವು ಹೇಳಿದೆ.

ಬೆಂಗಳೂರು ನಿವಾಸಿ ಎಚ್.ಪಿ.ರಾಜಣ್ಣ ಅವರು ಯೋಜನೆಯ ವಿರುದ್ಧ ದೂರು ನೀಡಿದ್ದರು. ಬೆಂಗಳೂರು ನಗರ ಜಿಲ್ಲೆಯ ವರ್ತೂರು ಹೋಬಳಿಯ ಕಸವನಹಳ್ಳಿ ಗ್ರಾಮದಲ್ಲಿ ಗೋದ್ರೆಜ್ ರಿಫ್ಲೆಕ್ಷನ್ಸ್ ಎಂಬ ಹೆಸರಿನ ವಸತಿ ಸಂಕೀರ್ಣವು ನಿರ್ಮಾಣವಾಗಿದೆ.

ಮೇಲ್ಮನವಿ: ‘ನಮ್ಮ ಪೂರ್ಣ ವಾದವನ್ನು ಗಣನೆಗೆ ತೆಗೆದುಕೊಳ್ಳದೆಯೇ ಆದೇಶನೀಡಲಾಗಿದೆ. ನಮ್ಮದು ಜವಾಬ್ದಾರಿ
ಯುತ ಉದ್ಯಮ ಸಂಸ್ಥೆ. ಎಲ್ಲ ನಿಯಮಗಳನ್ನೂ ನಾವು ಪಾಲಿಸುತ್ತೇವೆ. ಈ ಯೋಜನೆಯಲ್ಲಿಯೂ ನಿಯಮಗಳನ್ನು ಪಾಲಿಸಲಾಗಿದೆ ಎಂಬ ವಿಶ್ವಾಸವಿದೆ. ಆದೇಶವನ್ನು ಪ್ರಶ್ನಿಸುವ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಗೋದ್ರೆಜ್ ಪ್ರಾಪರ್ಟೀಸ್ ಲಿ. ನ ವಕ್ತಾರರು ತಿಳಿಸಿದ್ದಾರೆ.

‘ನೀರು ಹಾಳು ಮಾಡಿದವರು ನರಕಕ್ಕೆ’:ಕೊಳ, ಬಾವಿ ಅಥವಾ ಕೆರೆಗಳನ್ನು ಹಾಳು ಮಾಡುವ ಜನರು ನರಕಕ್ಕೆ ಹೋಗು ತ್ತಾರೆ ಎಂದು ವೇದ ಮತ್ತು ಪುರಾಣಗಳನ್ನು ಉಲ್ಲೇಖಿಸಿ ಎನ್‌ಜಿಟಿ ಹೇಳಿದೆ.

ಪ್ರತಿ ಮನುಷ್ಯ ದೇಹವು ಪಂಚಭೂತಗಳಿಂದಾಗಿದೆ. ಆಕಾಶ, ವಾಯು, ಅಗ್ನಿ, ಜಲ ಮತ್ತು ಪೃಥ್ವಿಯು ಅದರಲ್ಲಿ ಒಳಗೊಂಡಿದೆ. ಪ್ರತಿ ಜೀವಿಯಲ್ಲಿಯೂ ಈ ಎಲ್ಲದರ ಸಮತೋಲನವನ್ನು ಪ್ರಕೃತಿಯು ರೂಪಿಸಿದೆ ಎಂಬುದನ್ನು ವೇದವು ತಿಳಿಸುತ್ತದೆ ಎಂದು ಪೀಠ ಹೇಳಿದೆ.ನೀರಿಗೆ ವೇದಗಳಲ್ಲಿ ಬಹುದೊಡ್ಡ ಸ್ಥಾನವನ್ನು ನೀಡಲಾಗಿದೆ ಎಂದೂ ತಿಳಿಸಿದೆ.

‘ನೀರು ಹಾಳು ಮಾಡಿದವರು ನರಕಕ್ಕೆ’

ಕೊಳ, ಬಾವಿ ಅಥವಾ ಕೆರೆಗಳನ್ನು ಹಾಳು ಮಾಡುವ ಜನರು ನರಕಕ್ಕೆ ಹೋಗು ತ್ತಾರೆ ಎಂದು ವೇದ ಮತ್ತು ಪುರಾಣಗಳನ್ನು ಉಲ್ಲೇಖಿಸಿ ಎನ್‌ಜಿಟಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.