ನವದೆಹಲಿ: ರಾಜ್ಯದ ಬಳ್ಳಾರಿ ಜಿಲ್ಲೆ ಹಾಗೂ ಇತರ ಮೂರು ರಾಜ್ಯಗಳ ವಿವಿಧ ಸ್ಥಳಗಳಲ್ಲಿ ಶನಿವಾರ ಶೋಧ ಕಾರ್ಯ ನಡೆಸಿರುವ ರಾಷ್ಟ್ರೀಯ ತನಿಖಾ ದಳವು (ಎನ್ಐಎ) ನಕಲಿ ನೋಟು ಜಾಲವನ್ನು ಭೇದಿಸಿದೆ.

₹500, ₹200 ಮತ್ತು ₹100 ಮುಖಬೆಲೆಯ ನಕಲಿ ನೋಟುಗಳನ್ನು, ಮುದ್ರಣ ಕಾಗದ ಮತ್ತು ಇತರ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ.

ಗಡಿಯಾಚೆಯಿಂದ ನಕಲಿ ನೋಟು ಸಾಗಣೆ ಮಾಡಿ ಅದನ್ನು ದೇಶದಲ್ಲಿ ಚಲಾವಣೆಗೆ ತರಲು ಸಂಚು ರೂಪಿಸಿದ ಆರೋಪದಲ್ಲಿ ನವೆಂಬರ್ 24ರಂದು ದಾಖಲಾಗಿದ್ದ ಪ್ರಕರಣವನ್ನು ಆಧರಿಸಿ ಎನ್ಐಎ ಶೋಧ ಕಾರ್ಯ ನಡೆಸಿದೆ ಎಂದೂ ಹೇಳಿವೆ.

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ರಾಹುಲ್ ತಾನಾಜಿ ಪಾಟೀಲ್ ಅಲಿಯಾಸ್ ಜಾವೇದ್, ಉತ್ತರಪ್ರದೇಶದ ಶಹಜಹಾನ್ಪುರ ಜಿಲ್ಲೆಯ ವಿವೇಕ್ ಠಾಕೂರ್ ಅಲಿಯಾಸ್ ಆದಿತ್ಯ ಸಿಂಗ್ ಮತ್ತು ಬಳ್ಳಾರಿ ಜಿಲ್ಲೆಯ ಮಹೇಂದ್ರ ಎಂಬುವವರಿಗೆ ಸೇರಿದ ಸ್ಥಳಗಳಲ್ಲಿ ಶೋಧ ನಡೆದಿದೆ.

ಮಹೇಂದ್ರ ಅವರ ಮನೆಯಿಂದ ನಕಲಿ ನೋಟು ಮುದ್ರಿಸುವ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಹೇಳಿದೆ.

ಮಹಾರಾಷ್ಟ್ರದ ಯವತ್ಮಾಳ್ ಜಿಲ್ಲೆಯ ಶಿವ ಪಾಟೀಲ್ ಅಲಿಯಾಸ್ ಭೀಮ್ರಾವ್ ಮತ್ತು ಬಿಹಾರದ ರೋಹತಾಸ್ ಜಿಲ್ಲೆಯ ಶಶಿಭೂಷಣ್ ಎಂಬುವವರಿಗೆ ಸೇರಿದ ಸ್ಥಳಗಳಲ್ಲೂ ಶೋಧ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.