ನವದೆಹಲಿ: ‘ಕೋವಿಶೀಲ್ಡ್ ಲಸಿಕೆಯನ್ನು ಪಡೆದವರು ತಮ್ಮ ದೇಶಕ್ಕೆ ಪ್ರಯಾಣ ಕೈಗೊಳ್ಳಲು ಯುರೋಪ್ನ 9 ರಾಷ್ಟ್ರಗಳು ಅವಕಾಶ ನೀಡಿವೆ ಎಂದು ಮೂಲಗಳು ಹೇಳಿವೆ.

ಆಸ್ಟ್ರಿಯಾ, ಜರ್ಮನಿ, ಸ್ಲೊವೇನಿಯಾ, ಗ್ರೀಸ್, ಐಲ್ಯಾಂಡ್, ಐರ್ಲೆಂಡ್, ಸ್ಪೇನ್, ಸ್ವಿಟ್ಜರ್ಲೆಂಡ್ ಹಾಗೂ ಎಸ್ಟೋನಿಯಾ ಇವು ಕೋವಿಶೀಲ್ಡ್ ಲಸಿಕೆಯನ್ನು ಪಡೆದವರ ಪ್ರಯಾಣಕ್ಕೆ ಅನುಮತಿ ನೀಡಿರುವ ದೇಶಗಳಾಗಿವೆ.

ಕೋವಿಡ್ ಪಿಡುಗಿನ ಈ ಸಂದರ್ಭದಲ್ಲಿ ಜನರ ಪ್ರಯಾಣಕ್ಕೆ ತೊಂದರೆ ಆಗಬಾರದು ಎಂಬ ದೃಷ್ಟಿಯಿಂದ ಐರೋಪ್ಯ ಒಕ್ಕೂಟವು ಲಸಿಕೆ ಪಡೆದವರಿಗೆ ‘ಡಿಜಿಟಲ್ ಕೋವಿಡ್ ಪ್ರಮಾಣಪತ್ರ’ ಅಥವಾ ‘ಗ್ರೀನ್ ಪಾಸ್’ ವಿತರಿಸುವ ಕಾರ್ಯಕ್ರಮ ರೂಪಿಸಿದ್ದು, ಗುರುವಾರದಿಂದ ಈ ಕಾರ್ಯಕ್ರಮ ಜಾರಿಗೆ ಬಂದಿದೆ.

ಈ ವ್ಯವಸ್ಥೆಯಡಿ ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ(ಇಎಂಎ) ಅನುಮೋದಿಸಿರುವ ಲಸಿಕೆಯನ್ನು ಪಡೆದವರು ಯಾವುದೇ ನಿರ್ಬಂಧಗಳಿಲ್ಲದೇ ಯುರೋಪಿಯನ್ ರಾಷ್ಟ್ರಗಳಿಗೆ ಪ್ರಯಾಣಿಸಬಹುದಾಗಿದೆ.

ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆಯನ್ನು ಪಡೆದವರಿಗೆ ಯುರೋಪ್ ರಾಷ್ಟ್ರಗಳಿಗೆ ಪ್ರವಾಸ ಕೈಗೊಳ್ಳಲು ಅನುಮತಿ ಸಿಗಲಿಕ್ಕಿಲ್ಲ ಎಂಬ ಆತಂಕ ಭಾರತದಲ್ಲಿ ಮನೆ ಮಾಡಿತ್ತು. ಈ ಹಿನ್ನೆಲೆಯಲ್ಲಿ, ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಯನ್ನು ಪಡೆದ ಭಾರತೀಯರು ಯುರೋಪ್ ಒಕ್ಕೂಟದ ರಾಷ್ಟ್ರಗಳಿಗೆ ಪ್ರಯಾಣ ಕೈಗೊಳ್ಳಲು ಅನುಮತಿ ನೀಡುವಂತೆ ಭಾರತ ಮನವಿ ಮಾಡಿದೆ.

ಈ ವಿಷಯದ ಬಗ್ಗೆ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಯುರೋಪ್ ಒಕ್ಕೂಟದ ಉನ್ನತ ಪ್ರತಿನಿಧಿ ಜೋಸೆಫ್ ಬೊರೆಲ್ಲಾ ಫಾಂಟೆಲ್ಲಸ್ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ... ಪಂಜಾಬ್ ಗದ್ದುಗೆಯತ್ತ ಕೇಜ್ರಿವಾಲ್ ದೃಷ್ಟಿ; ಕಾಂಗ್ರೆಸ್ನಲ್ಲಿ ಒಳಜಗಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.