ನವದೆಹಲಿ:ಅಕ್ರಮವಾಗಿ ‘ಸಾಲಮರುಪಾವತಿ ಖಾತರಿ ಪತ್ರಗಳ (ಎಲ್‌ಒಯು)’ ನೆರವಿನಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ ₹13,000 ಕೋಟಿ ಸಾಲ ಪಡೆದು ಮರುಪಾವತಿ ಮಾಡದೆ ಪರಾರಿಯಾಗಿರುವ ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿಮಾಡಿದೆ.

ವಂಚನೆ ಪ್ರಕರಣದಲ್ಲಿ ನೀರವ್ ಮೋದಿ ಸಹೋದರ ನಿಶಾಲ್ ಮೋದಿ ಹಾಗೂ ಆತನ ಕಂಪನಿ ಉದ್ಯೋಗಿ ಸುಭಾಷ್ ಪರಬ್ ವಿರುದ್ಧವೂ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿದೆ.

ಪಿಎನ್‌ಬಿಗೆ ₹13 ಸಾವಿರ ಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ನೀರವ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವಂತೆ ಜಾರಿ ನಿರ್ದೇಶನಾಲಯ ಇಂಟರ್‌ಪೋಲ್‌ಗೆ ಮನವಿ ಮಾಡಿತ್ತು. ಇಂಟರ್‌ಪೋಲ್ ತನ್ನ ಸದಸ್ಯ ರಾಷ್ಟ್ರಗಳಿಗೆ ಆರೋಪಿಯನ್ನು ಬಂಧಿಸಲು ಅಥವಾ ವಶಕ್ಕೆ ಪಡೆಯಲು ನೋಟಿಸ್ ಮೂಲಕ ಆಗ್ರಹಿಸಿದೆ.

ನೀರವ್ ಮೋದಿ ಇಂಗ್ಲೆಂಡ್‌ನಲ್ಲಿ ತಲೆಮರೆಸಿಕೊಂಡಿರುವ ಕುರಿತು ವರದಿಯಾಗಿದ್ದು, ಈಗಾಗಲೇ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ. ನೀರವ್ ಮೋದಿಗೆ ಪ್ರವೇಶ ನಿರಾಕರಿಸುವಂತೆ ಕೆಲವು ರಾಷ್ಟ್ರಗಳಿಗೆ ಭಾರತದಿಂದ ಮನವಿ ಮಾಡಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿ ಜೂನ್ 28ರಂದು ತಿಳಿಸಿದ್ದರು.

ಸಿಬಿಐ ಅಧಿಕಾರಿಗಳು ಮೇ 15ರಂದು ನೀರವ್ ಮೋದಿ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ.

ಇಂಟರ್‌ಪೋಲ್:’ಇಂಟರ್‌ಪೋಲ್’ ಅಂತರರಾಷ್ಟ್ರೀಯ ಅಪರಾಧ ಪೊಲೀಸ್ ಸಂಘಟನೆ ಎಂಬುದರ ಸಂಕ್ಷಿಪ್ತ ರೂಪ.

ವಿಶ್ವದ 192 ದೇಶಗಳು ಇದರ ಸದಸ್ಯತ್ವ ಪಡೆದುಕೊಂಡಿವೆ. ಸದಸ್ಯ ದೇಶಗಳ ಪೊಲೀಸ್ ಪಡೆ ಅಥವಾ ಕಾನೂನು ಜಾರಿ ಪ್ರಾಧಿಕಾರಗಳ ಜಾಲದಂತೆ ಇಂಟರ್‌ಪೋಲ್ ಕಾರ್ಯನಿರ್ವಹಿಸುತ್ತದೆ.

ಯಾವುದೇ ಪ್ರಕರಣದಲ್ಲಿ ಜಾರಿಯಾದ ರೆಡ್ ಕಾರ್ನರ್ ನೋಟಿಸ್ ಅನ್ನು ಅದು ಸದಸ್ಯ ರಾಷ್ಟ್ರಗಳಿಗೆ ಕಳುಹಿಸುತ್ತದೆ. ಆನಂತರ ಆರೋಪಿಗಳ ಪತ್ತೆಗೆ ಸದಸ್ಯ ರಾಷ್ಟ್ರಗಳು ಎಲ್ಲಾ ಸ್ವರೂಪದಲ್ಲೂ ನೆರವಾಗುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.