ಚಂಡಿಗಡ: ಹರಿಯಾಣದ ಎಂ.ಎಲ್.ಖಟ್ಟರ್ ನೇತೃತ್ವದ ಬಿಜೆಪಿ–ಜೆಜೆಪಿ ಮೈತ್ರಿಕೂಟ ಸರ್ಕಾರದ ವಿರುದ್ಧ ವಿರೋಧ ಪಕ್ಷ ಕಾಂಗ್ರೆಸ್ ಬುಧವಾರ ಅವಿಶ್ವಾಸ ನಿರ್ಣಯ ಮಂಡಿಸಿದೆ.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿ ಮುಗಿದ ನಂತರ ಸ್ಪೀಕರ್ ಗ್ಯಾನ್ಚಂದ್ ಗುಪ್ತಾಅವರು ವಿರೋಧ ಪಕ್ಷದ ನಾಯಕ ಭೂಪಿಂದರ್ ಸಿಂಗ್ ಹೂಡಾ ಮಂಡಿಸಿದಅವಿಶ್ವಾಸ ನಿರ್ಣಯವನ್ನು ಸ್ವೀಕರಿಸಿದರು.

‘ನಾನು ವಿರೋಧ ಪಕ್ಷದ ನಾಯಕರು ಮತ್ತು ಇತರ 27 ಕಾಂಗ್ರೆಸ್ ಶಾಸಕರು ಮಂಡಿಸಿರುವ ಅವಿಶ್ವಾಸ ನಿರ್ಣಯವನ್ನು ಸ್ವೀಕರಿಸಿದ್ದೇನೆ‘ ಎಂದು ಸ್ಪೀಕರ್ ಹೇಳಿದರು. ಅವಿಶ್ವಾಸ ನಿರ್ಣಯದ ಮೇಲೆ ಎರಡು ಗಂಟೆಗಳ ಚರ್ಚೆಗೆ ಅವರು ಅವಕಾಶ ನೀಡಿದರು.

90 ಸದಸ್ಯ ಬಲದ ವಿಧಾನಸಭೆಯಲ್ಲಿ ಪ್ರಸ್ತುತ 88 ಸದಸ್ಯರಿದ್ದಾರೆ.ಇದರಲ್ಲಿ ಆಡಳಿತಾರೂಢ ಬಿಜೆಪಿಯ 40 ಸದಸ್ಯರು, ಜೆಜೆಪಿ 10 ಮತ್ತು ಕಾಂಗ್ರೆಸ್ನ 30 ಸದಸ್ಯರು ಸೇರಿದ್ದಾರೆ. ಏಳು ಮಂದಿ ಪಕ್ಷೇತರ ಶಾಸಕರಿದ್ದು,ಐವರು ಸರ್ಕಾರವನ್ನು ಬೆಂಬಲಿಸುತ್ತಿದ್ದಾರೆ. ಹರಿಯಾಣ ಲೋಖಿತ್ ಪಕ್ಷದ ಒಬ್ಬ ಸದಸ್ಯರೂ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.