ಭುವನೇಶ್ವರ: ನಿಗದಿತ ಆಸ್ತಿಗಿಂತ ₹2.96 ಕೋಟಿ ಅಧಿಕ ಆಸ್ತಿ ಹೊಂದಿದ್ದ ಆರೋಪದ ಮೇರೆಗೆ ಒಡಿಶಾದ ಅಂಗನವಾಡಿ ಕಾರ್ಯಕರ್ತೆಯೊಬ್ಬರನ್ನು ಬಂಧಿಸಲಾಗಿದೆ.

ಭುವನೇಶ್ವರದ ಕೊರಾಡಕಾಂತ ಅಂಗನವಾಡಿ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಕಬಿತಾ ಮತನ್ ಅವರು ನಿಗದಿತ ಆಸ್ತಿಗಿಂತ ಅಧಿಕ ಆಸ್ತಿ ಹೊಂದಿದ್ದಾರೆ ಎಂಬ ದೂರುಗಳು ಬಂದ ಕಾರಣ ಅವರ ಮನೆ ಮೇಲೆ ದಾಳಿ ನಡೆಸಲಾಯಿತು ಎಂದು ರಾಜ್ಯದ ವಿಚಕ್ಷಣಾ ನಿರ್ದೇಶನಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಖುರ್ದಾ, ಕೇಂದ್ರಪಾರ ಮತ್ತು ಜಗತ್‌ಸಿಂಗ್‌ಪುರ ಜಿಲ್ಲೆಗಳಲ್ಲಿ ಶೋಧ ನಡೆಯಿತು. ಈ ವೇಳೆ ₹ 4 ಕೋಟಿ ಮೌಲ್ಯದ ಚರ ಮತ್ತು ಸ್ಥಿರಾಸ್ತಿಗಳು ಪತ್ರೆಯಾಗಿವೆ. ಈಕೆ 7 ಕಟ್ಟಡಗಳು, ಭುವನೇಶ್ವರದಲ್ಲಿನ 10 ನಿವೇಶನಗಳ ಸಹಿತ ಒಟ್ಟು 14 ನಿವೇಶನಗಳನ್ನು ಹೊಂದಿದ್ದಾರೆ. ಅವರು ಗಳಿಸಿರುವ ಆಸ್ತಿ ಅವರ ನಿಗದಿತ ಆಸ್ತಿಗಿಂತ ಶೇ 494ರಷ್ಟು ಅಧಿಕವಾಗಿದೆ ಎಂದು ತಿಳಿಸಲಾಗಿದೆ.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿಯಲ್ಲಿ ಕಬಿತಾ ಮತ್ತು ಆಕೆಯ ಪತಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಕಬಿತಾ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

7.50 ಲಕ್ಷ ಪಿಂಚಣಿದಾರರ ಭೌತಿಕ ಪರಿಶೀಲನೆ: 4.19 ಲಕ್ಷ ಮಂದಿ ‘ಅನರ್ಹ’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.