ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರ ಮೇಲೆಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್ಎ) ಹೇರಿ ಬಂಧನದ ಅವಧಿ ವಿಸ್ತರಿಸಲಾಗಿದೆ.

ಜಮ್ಮು–ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಇವರನ್ನು 6 ತಿಂಗಳ ಕಾಲ ಬಂಧನದಲ್ಲಿರಿಸಲಾಗಿತ್ತು. ಬಂಧನ ಅವಧಿ ಮುಗಿಯಲು ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿರುವಾಗ ಗುರುವಾರ ರಾತ್ರಿ ಪಿಎಸ್ಎ ಹೇರಿ ಮತ್ತೆ ಬಂಧನದಲ್ಲಿಡಲಾಗಿದೆ.

ಆಗಸ್ಟ್ 5ರಿಂದ ಹರಿ ನಿವಾಸದಲ್ಲಿ 49 ರ ಹರೆಯದ ಒಮರ್ ಗೃಹ ಬಂಧನದಲ್ಲಿದ್ದಾರೆ. ಗುರುವಾರ ರಾತ್ರಿ ಪೊಲೀಸ್ ಅಧಿಕಾರಿಗಳೊಂದಿಗೆ ಇಲ್ಲಿಗೆ ಬಂದ ಮೆಜಿಸ್ಟ್ರೇಟ್ ಪಿಎಸ್ಎ ವಾರೆಂಟ್ ನೀಡಿದ್ದಾರೆ. 2009ರಿಂದ 2014ರ ಅವಧಿಯಲ್ಲಿ ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದರು ಒಮರ್ ಅಬ್ದುಲ್ಲಾ.

ಒಮರ್ ಅಬ್ದುಲ್ಲಾ ಅವರ ಅಪ್ಪ ಫಾರೂಕ್ ಅಬ್ದುಲ್ಲಾ ಅವರ ವಿರುದ್ಧ ಕಳೆದ ವರ್ಷ ಸಪ್ಟೆಂಬರ್ನಲ್ಲಿ ಪಿಎಸ್ಎ ಹೇರಲಾಗಿತ್ತು. ಡಿಸೆಂಬರ್ ನಲ್ಲಿ ಅದನ್ನು ಪರಿಶೀಲಿಸಿ ಬಂಧನ ಅವಧಿಯನ್ನು ಮೂರು ತಿಂಗಳವರೆಗೆ ವಿಸ್ತರಿಸಲಾಗಿತ್ತು.

ಸರ್ಕಾರಿ ಅತಿಥಿಗೃಹದಲ್ಲಿ ಗೃಹ ಬಂಧನಕ್ಕೊಳಗಾಗಿರುವ ಮೆಹಬೂಬಾ ಮುಫ್ತಿ ಅವರಿಗೂ ಇದೇ ರೀತಿ ವಾರೆಂಟ್ ನೀಡಲಾಗಿದೆ.ಮುಫ್ತಿ ನೇತೃತ್ವದ ಪಿಡಿಪಿ ಮತ್ತು ಬಿಜೆಪಿ 2014ರಲ್ಲಿ ಕಾಶ್ಮೀರದಲ್ಲಿ ಸರ್ಕಾರ ರಚನೆ ಮಾಡಿತ್ತು. 2018ರಲ್ಲಿಬಿಜೆಪಿ ದಿಢೀರನೆ ಬೆಂಬಲ ವಾಪಸ್ ಪಡೆದಿದ್ದು, ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಬಂದಿತ್ತು.

ಸರ್ಕಾರವು ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದೆ . ಇಲ್ಲಿ ಸಮಾನತೆ, ಸಾಮಾಜಿಕ ನ್ಯಾಯ ಯಾವುದಕ್ಕೂ ಬೆಲೆ ಇಲ್ಲ ಎಂದು ಮುಫ್ತಿ ಅವರ ಮಗಳು ಇಲ್ತಿಜಾ ಹೇಳಿದ್ದಾರೆ.

ಅದೇ ವೇಳೆನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಅಲಿ ಮೊಹಮ್ಮದ್ ಸಾಗರ್ ಮತ್ತು ಪಿಡಿಪಿ ನಾಯಕ ಸರ್ತಾಜ್ ಮಾಧ್ವಿ ವಿರುದ್ಧವೂ ಪಿಎಸ್ಎ ಹೇರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.