ಲಾಹೋರ್: ಪಾಕಿಸ್ತಾನದಲ್ಲಿ ಸೇನೆ ಮತ್ತು ಐಎಸ್‌ಐ ಒಟ್ಟುಗೂಡಿ ಇಮ್ರಾನ್ ಖಾನ್ ನೇತೃತ್ವದಲ್ಲಿ ‘ಸೂತ್ರದ ಗೊಂಬೆ’ ಸರ್ಕಾರವನ್ನು ಸ್ಥಾಪಿಸಿದೆ ಎಂದು ಮಾಜಿ ಪ್ರಧಾನಿ, ಪಿಎಂಎಲ್ –ಎನ್ ಮುಖ್ಯಸ್ಥ ನವಾಜ್ ಷರೀಫ್ ತರಾಟೆಗೆ ತೆಗೆದುಕೊಂಡಿದ್ದಾರೆ.

ವಿವಿಧ 11 ಪಕ್ಷಗಳ ಮೈತ್ರಿಕೂಟವಾಗಿರುವ ಪಾಕಿಸ್ತಾನ್ ಡೆಮಾಕ್ರಟಿಕ್ ಮೂವ್‌ಮೆಂಟ್‌ನ (ಪಿಡಿಎಂ) ಪ್ರಚಾರ ಸಭೆಯಲ್ಲಿ ಶನಿವಾರ ಅವರು ಮಾತನಾಡಿದರು. ಸದ್ಯ ಲಂಡನ್‌ನಲ್ಲಿ ಇರುವ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಮೈತ್ರಿಕೂಟದ ಪ್ರಚಾರ ಸಭೆಯು ಲಾಹೋರ್‌ನಿಂದ 80 ಕಿ.ಮೀ ದೂರದಲ್ಲಿರುವ ಗುಜ್ರನ್‌ವಾಲಾದಲ್ಲಿ ನಡೆಯಿತು.

ಸೆ.20ರಂದು ವಿವಿಧ ವಿರೋಧಪಕ್ಷಗಳು ಒಟ್ಟಾಗಿ ಪಿಡಿಎಂ ಸ್ಥಾಪಿಸಿಕೊಂಡು, ಇಮ್ರಾನ್ ಖಾನ್ ನೇತೃತ್ವದ ಸರ್ಕಾರದ ಪದಚ್ಯುತಿಗಾಗಿ ಹಂತ ಹಂತವಾಗಿ ಪ್ರತಿಭಟನೆ, ಹೋರಾಟಗಳನ್ನು ಹಮ್ಮಿಕೊಳ್ಳುವುದಾಗಿ ಪ್ರಕಟಿಸಿದ್ದವು.

‘ಪಾಕ್‌ನ ಸೇನಾ ನಾಯಕತ್ವವನ್ನು ಟೀಕಿಸಿದ ಷರೀಫ್ ಅವರು, ಸೇನಾ ಮುಖ್ಯಸ್ಥ ಜನರಲ್ ಕಮಾರ್ ಜಾವೇದ್ ಬಜ್ವಾ ಅವರು ನನ್ನ ನೇತೃತ್ವದ ಸರ್ಕಾರವನ್ನು ಅಂತ್ಯಗೊಳಿಸಿದರು. 2018ರ ಚುನಾವಣೆಯಲ್ಲಿ ಅಕ್ರಮ ಎಸಗಿ, ಸೂತ್ರದ ಗೊಂಬೆಯಂತಿರುವ ಇಮ್ರಾನ್ ಖಾನ್ ಅವರನ್ನು ಅಧಿಕಾರಕ್ಕೆ ತಂದರು‘ ಎಂದು ಆರೋಪಿಸಿದರು.

ದೇಶದಲ್ಲಿ ಈಗ ಜನರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಬಜ್ವಾ ನೇರ ಕಾರಣಕರ್ತರು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.