ನವದೆಹಲಿ: ಮುಂಬರುವ ಸಂಸತ್ನ ಚಳಿಗಾಲ ಅಧಿವೇಶನದಲ್ಲಿ ಒಟ್ಟು 5 ಹೊಸ ಮಸೂದೆಗಳನ್ನು ಮಂಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ರಾಷ್ಟ್ರೀಯ ಭದ್ರತೆ ಹಾಗೂ ವಾಣಿಜ್ಯ ಉದ್ದೇಶಕ್ಕಾಗಿ ಭಾರತದ ಹಡಗು ಹಾಗೂ ಭಾರತದ ಬಂದರುಗಳ ರಕ್ಷಣೆ ಮಸೂದೆ ಸೇರಿ ಒಟ್ಟು 5 ಹೊಸ ಮಸೂದೆಗಳು ಪಟ್ಟಿಯಲ್ಲಿ ಇವೆ.

ಸದ್ಯ ಜಂಟಿ ಸಂಸದೀಯ ಸಮಿತಿಯ ವರದಿಯ ಬಳಿಕ ವಕ್ಫ್ ತಿದ್ದುಪಡಿ ಮಸೂದೆಯನ್ನು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯುವ ಯೋಜನೆ ಕೇಂದ್ರ ಸರ್ಕಾರದ್ದು.
.ಸಂಸತ್ ಚಳಿಗಾಲದ ಅಧಿವೇಶನ ನ.25ರಿಂದ ಡಿ.20ರವರೆಗೆ.
ಬಾಕಿ ಇರುವ 13 ಸೇರಿ ಒಟ್ಟು 18 ಮಸೂದೆಗಳ ಪಟ್ಟಿಯನ್ನು ಲೋಕಸಭೆ ಹಾಗೂ ರಾಜ್ಯಸಭೆ ಸಚಿವಾಲಯಕ್ಕೆ ಕೇಂದ್ರ ಸರ್ಕಾರ ಸಲ್ಲಿಸಿದೆ. ಲೋಕಸಭೆಯಲ್ಲಿ 15 ಹಾಗೂ ರಾಜ್ಯಸಭೆಯಲ್ಲಿ 18 ಮಸೂದೆಗಳನ್ನು ಮಂಡಿಸುವ ಪ್ರಸ್ತಾಪ ಇದೆ.

ಕರಾವಳಿ ವ್ಯಾಪಾರವನ್ನು ಉತ್ತೇಜಿಸಲು, ರಾಷ್ಟ್ರೀಯ ಭದ್ರತೆ ಮತ್ತು ವಾಣಿಜ್ಯ ಅಗತ್ಯಗಳಿಗಾಗಿ ಭಾರತೀಯ ನಾಗರಿಕರ ಮಾಲೀಕತ್ವದ ಮತ್ತು ನಿರ್ವಹಣೆಯ ಹಡಗುಗಳ ಭಾಗವಹಿಸುವಿಕೆಯನ್ನು ಉತ್ತೇಜಿಸಲು, ‘ಕರಾವಳಿ ನೌಕಾಯಾನ ಮಸೂದೆ– 2024’ ಈ ಅಧಿವೇಶನಲ್ಲಿ ಮಂಡನೆಯಾಗಲಿದೆ.
.ಜುಲೈ 22ರಿಂದ ಸಂಸತ್ ಅಧಿವೇಶನ; ರಾಷ್ಟ್ರೀಕೃತ ಬ್ಯಾಂಕ್ಗಳ ಖಾಸಗೀಕರಣಕ್ಕೆ ಸಿದ್ಧತೆ.
ಭಾರತದ ಅಂತರಾಷ್ಟ್ರೀಯ ನಿಯಮ ಮತ್ತು ಶಾಸನಬದ್ಧ ಅನುಸರಣೆಗೆ ಅನುಗುಣವಾಗಿ ಬಂದರುಗಳ ಸಂರಕ್ಷಣೆ, ಭದ್ರತೆ ಮತ್ತು ಬಂದರುಗಳಲ್ಲಿ ಮಾಲಿನ್ಯ ನಿಯಂತ್ರಣವನ್ನು ತಡೆಗಟ್ಟಲು ‘ಭಾರತೀಯ ಬಂದರು ಮಸೂದೆ –2024’ ಮಂಡನೆಯಾಗುತ್ತಿರುವ ಮತ್ತೊಂದು ಹೊಸ ಮಸೂದೆ. ‘ಮರ್ಚೆಂಟ್ ಶಿಪ್ಪಿಂಗ್ ಬಿಲ್– 2024’, ‘ಪಂಜಾಬ್ ನ್ಯಾಯಾಲಯಗಳ (ತಿದ್ದುಪಡಿ) ಮಸೂದೆ, ‘ರಾಷ್ಟ್ರೀಯ ಸಹಕಾರಿ ವಿಶ್ವವಿದ್ಯಾಲಯ ಮಸೂದೆ’ ಪಟ್ಟಿಯಲ್ಲಿರುವ ಹೊಸ ಮಸೂದೆಗಳು.

ವಿಪತ್ತು ನಿರ್ವಹಣೆ (ತಿದ್ದುಪಡಿ) ಮಸೂದೆ– 2024, ಗೋವಾ ರಾಜ್ಯದ ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಶಿಷ್ಟ ಪಂಗಡಗಳ ಪ್ರಾತಿನಿಧ್ಯದ ಮರುಹೊಂದಾಣಿಕೆ ಮಸೂದೆ– 2024, ಮುಸಲ್ಮಾನ್ ವಕ್ಫ್ (ರದ್ದತಿ) ಮಸೂದೆ –2024, ಲಾಡಿಂಗ್ ಮಸೂದೆ– 2024, ಸಮುದ್ರ ಮೂಲಕ ಸರಕು ಸಾಗಣೆ ಮಸೂದೆ– 2024, ರೈಲ್ವೆ (ತಿದ್ದುಪಡಿ) ಮಸೂದೆ– 2024 ಮತ್ತು ಬ್ಯಾಂಕಿಂಗ್ ಕಾನೂನುಗಳು (ತಿದ್ದುಪಡಿ) ಮಸೂದೆ –2024 ಇವಿಷ್ಟು ಉಳಿದಿರುವ ಮಸೂದೆಗಳು.

ರಾಜ್ಯಸಭೆಯಲ್ಲಿ, ತೈಲ ಕ್ಷೇತ್ರಗಳ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ಮಸೂದೆ– 2024 ಮತ್ತು ಬಾಯ್ಲರ್ಗಳ ಮಸೂದೆ– 2024 ಸೇರಿದಂತೆ ಮೂರು ಮಸೂದೆಗಳು ಬಾಕಿ ಉಳಿದಿವೆ. ಲೋಕಸಭೆಯಿಂದ ಅಂಗೀಕರಿಸಲ್ಪಟ್ಟ ಭಾರತೀಯ ವಾಯುಯಾನ ಮಸೂದೆ– 2024 ರಾಜ್ಯಸಭೆಯಲ್ಲೂ ಬಾಕಿ ಉಳಿದಿದೆ.
.ಚಿತ್ತಾಪುರ: 10 ಗ್ರಾಮಗಳ 418 ಎಕರೆ ಜಮೀನು ವಕ್ಫ್ ಮಂಡಳಿ ಆಸ್ತಿ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.