ರಾಜ್‌ಘಡ (ಮಧ್ಯಪ್ರದೇಶ): ಪ್ರಾಚೀನ ಕಾಲದ ಚಿನ್ನ ಮತ್ತು ಬೆಳ್ಳಿ ನಾಣ್ಯಕ್ಕಾಗಿ ಪಾರ್ವತಿ ನದಿಯ ಪಾತ್ರದ ಬಳಿಜನರು ಮುಗಿಬಿದ್ದಿದ್ದಾರೆ. ಅಲ್ಲದೆ ನದಿ ಪಾತ್ರವನ್ನು ಅಗೆಯುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ.

ಮಧ್ಯಪ್ರದೇಶದ ರಾಜ್‌ಘಡ ಜಿಲ್ಲೆಯಶಿವಪುರ ಗ್ರಾಮದ ಬಳಿಯಿರುವ ಪಾರ್ವತಿ ನದಿಯಲ್ಲಿಪ್ರಾಚೀನ ಕಾಲದ ಚಿನ್ನ ಮತ್ತು ಬೆಳ್ಳಿ ನಾಣ್ಯಗಳಿವೆ ಎಂಬ ಗಾಳಿಸುದ್ದಿ ಗ್ರಾಮದೆಲ್ಲೆಡೆ ಹಬ್ಬಿದೆ.

‘ಗಾಳಿ ಸುದ್ದಿಗೆ ಕಿವಿಗೊಟ್ಟು, ಜನರು ಇಲ್ಲಿ ಸೇರತೊಡಗಿದ್ದಾರೆ. ಆದರೆ ಈವರೆಗೆ ಯಾರೊಬ್ಬರಿಗೂ ಒಂದು ನಾಣ್ಯವೂ ಸಿಕ್ಕಿಲ್ಲ’ ಎಂದು ಕುರಾವರ್‌ನ ವರಿಷ್ಠ ಪೊಲೀಸ್ ಅಧಿಕಾರಿ ರಾಮನರೇಶ್ ರಾಥೋಡ್ ಅವರು ಹೇಳಿದರು.

‘ನಾನು ಎರಡು ಗಂಟೆಗಳ ಕಾಲ ನದಿಯ ಬಳಿಯೇ ನಿಂತಿದ್ದೆ. ನದಿಯನ್ನು ಅಗೆಯಬೇಡಿ ಎಂದು ಮನವಿ ಮಾಡಿದೆ. ಅವರಿಗೆ ಈವರೆಗೂ ಒಂದೇ ಒಂದು ನಾಣ್ಯ ಸಿಕ್ಕಿಲ್ಲ. ಆದರೂ ನಾಣ್ಯಕ್ಕಾಗಿ ನದಿಪಾತ್ರ ಅಗೆಯುವವರ ಸಂಖ್ಯೆಯಲ್ಲಿ ಮಾತ್ರ ಏರಿಕೆಯಾಗುತ್ತಿದೆ. ಈ ಗಾಳಿಸುದ್ದಿಯನ್ನು ಯಾರು ಹಬ್ಬಿಸಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.