ನವದೆಹಲಿ: ಕರ್ತಾರ್ಪುರಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡುವ ಯಾತ್ರಿಕರ ಸಂಖ್ಯೆ ಹೆಚ್ಚಳವಾಗಿದೆ. ಪಾಕಿಸ್ತಾನದ ಗಡಿಪ್ರದೇಶದಿಂದ ಇಲ್ಲಿಗೆ ಆಗಮಿಸುತ್ತಿರುವ ಯಾತ್ರಿಕರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ.

ನವೆಂಬರ್ 24 ಭಾನುವಾರದಂದು ಸರಿಸುಮಾರು 1,800 ಮಂದಿ ಗಡಿ ದಾಟಿ ಕರ್ತಾರ್ಪುರಕ್ಕೆ ಬರಲಿದ್ದಾರೆ ಎಂದು ಇಲ್ಲಿನ ಜನರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಇದನ್ನೂ ಓದಿ:ಕರ್ತಾರ್ಪುರ ಗುರುದ್ವಾರ ಸಾಕಾರ: ಪಾಕ್ ಪ್ರಧಾನಿಯಿಂದ ನಾಳೆ ಉದ್ಘಾಟನೆ

ನವೆಂಬರ್ 17ರಂದು 671 ಮಂದಿ ಕರ್ತಾರ್ಪುರಕ್ಕೆ ಭೇಟಿ ನೀಡಿದ್ದರು. ಆದರೆ ಮುಂದಿನ ವಾರ ಇದರ ಮೂರು ಪಟ್ಟು ಯಾತ್ರಿಕರು ಬರಲಿದ್ದಾರೆ ಎಂದಿದ್ದಾರೆ ಅಲ್ಲಿನ ಬೆಳವಣಿಗೆಗಳ ಬಗ್ಗೆ ಮಾಹಿತಿಯಿರುವ ಜನರು.

ಸರ್ಕಾರಿ ಅಂಕಿಅಂಶಗಳ ಪ್ರಕಾರ ಸಿಖ್ ಧಾರ್ಮಿಕ ಹಬ್ಬ ಮತ್ತು ವಾರಾಂತ್ಯಗಳಲ್ಲಿ ಯಾತ್ರಿಕರ ಸಂಖ್ಯೆ ಜಾಸ್ತಿಯಾಗುತ್ತಿದೆ. ನವೆಂಬರ್ 9ರಂದು ಕಾರಿಡಾರ್ ಉದ್ಘಾಟನೆಯಾದಾಗ 562 ಭಾರತೀಯರು ಇಲ್ಲಿ ಭೇಟಿ ನೀಡಿದ್ದರು.

ಅದೇ ವೇಳೆ ಗುರುನಾನಕ್ ಅವರ 550ನೇ ಜಯಂತಿ ಆಚರಣೆಯಾದ ನವೆಂಬರ್ 12ರಂದು ಭಾರತದಿಂದ 546 ಮಂದಿ ಇಲ್ಲಿಗೆ ಆಗಮಿಸಿದ್ದರು.

ಇದನ್ನೂ ಓದಿ:ಸೌಹಾರ್ದದ ಹೊಸ ಶಕೆಗೆ ಕರ್ತಾರ್ಪುರ ಮುನ್ನುಡಿಯಾಗಲಿ

ಅಂಕಿ ಅಂಶಗಳ ಪ್ರಕಾರ ನವೆಂಬರ್ 10 ಭಾನುವಾರ ಇಲ್ಲಿಗೆ229 ಮಂದಿ ಭೇಟಿ ನೀಡಿದ್ದು ನವೆಂಬರ್ 11ರಂದು 122, ನವೆಂಬರ್ 13ರಂದು 279, ನವೆಂಬರ್ 14ರಂದು 241, ನವೆಂಬರ್ 15ರಂದು 161 ಮತ್ತು ನವೆಂಬರ್ 16ರಂದು 40 ಮಂದಿ ಭೇಟಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.