ಚಂಡಿಗಡ: ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರುದ್ಧ ಬಂಡಾಯದ ಧ್ವನಿ ಮೊಳಗಿದ ಒಂದು ದಿನದ ನಂತರ, ನಾಲ್ವರು ಸಂಪುಟ ಸಚಿವರು ಬುಧವಾರ ಡೆಹ್ರಾಡೂನ್‌ನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ಹರೀಶ್ ರಾವತ್ ಅವರನ್ನು ಭೇಟಿ ಮಾಡಿದ್ದಾರೆ.

ಬಂಡಾಯ ಎದ್ದಿರುವ ಸಚಿವರಾದದ ತ್ರಿಪ್ಟ್ ರಾಜೀಂದರ್ ಸಿಂಗ್ ಬಜ್ವಾ, ಸುಖ್ಬಿಂದರ್ ಸಿಂಗ್ ಸರ್ಕಾರಿಯಾ, ಸುಖ್ವಿಂದರ್ ಸಿಂಗ್ ರಾಂಧವಾ ಮತ್ತು ಚರಣ್‌ಜಿತ್ ಸಿಂಗ್ ಚನ್ನಿ ಅವರು ಈ ನಿಯೋಗದಲ್ಲಿದ್ದರು.

ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರ ವಿರೋಧಿ ಬಣಕ್ಕೆ ಸೇರಿದ ಈ ನಾಲ್ವರು ಸಚಿವರು ಮಂಗಳವಾರ ಹಲವು ಶಾಸಕರೊಂದಿಗೆ ಇಲ್ಲಿ ಸಭೆ ನಡೆಸಿದ್ದರು. ‘ನಮಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಮುಖ್ಯಮಂತ್ರಿ ವಿಫಲರಾಗಿದ್ದಾರೆ. ನಮಗೆ ಅವರ ಮೇಲಿನ ನಂಬಿಕೆಯೂ ಹೋಗಿದೆ. ಹಾಗಾಗಿ ಅವರನ್ನು ಬದಲಿಸಬೇಕು‘ ಎಂದು ಸಚಿವರು ಸಭೆಯಲ್ಲಿ ಒತ್ತಾಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.