ಮುಂಬೈ: ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2023ರ ಕಿರೀಟವನ್ನು ರಾಜಸ್ಥಾನದ ನಂದಿನಿ ಗುಪ್ತಾ ಮುಡಿಗೇರಿಸಿಕೊಂಡಿದ್ದಾರೆ.

ಶನಿವಾರ ಮಣಿಪುರದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ 19 ವರ್ಷದ ನಂದಿನಿ ಗುಪ್ತಾ, ‘ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2023’ರ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ದೆಹಲಿಯ ಶ್ರೇಯಾ ಪೂಂಜಾ ಮೊದಲ ರನ್ನರ್ ಆಪ್, ಹಾಗೂ ಮಣಿಪುರದ ತೌನೊಜಮ್ ಸ್ಟ್ರೆಲಾ ಲುವಾಂಗ್ 2 ನೇ ರನ್ನರ್ ಆಗಿ ಹೊರಹೊಮ್ಮಿದ್ದಾರೆ.

ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನಡೆಯಲಿರುವ ‘ಗ್ರ್ಯಾಂಡ್ ಮಿಸ್ ವರ್ಲ್ಡ್’ ಸ್ಪರ್ಧೆಯ 71ನೇ ಆವೃತ್ತಿಯಲ್ಲಿ ಭಾರತವನ್ನು ನಂದಿನಿ ಪ್ರತಿನಿಧಿಸಲಿದ್ದಾರೆ.

ನಂದಿನಿ ಗುಪ್ತಾ ಅವರು ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದುಕೊಂಡಿದ್ದಾರೆ.

ಮಿಸ್ ಇಂಡಿಯಾ ಸಂಸ್ಥೆಯ ಪ್ರಕಾರ, ರತನ್ ಟಾಟಾ ಅವರು ನಂದಿನಿಯ ಜೀವನದಲ್ಲಿ ಅತ್ಯಂತ ಪ್ರಭಾವ ಬೀರಿದ ವ್ಯಕ್ತಿ. ಅವರ ಮಾನವೀಯತೆ ಹಾಗೂ ದಾನ ಮಾಡುವ ಗುಣ ಹೆಚ್ಚು ಇಷ್ಟಪಡುತ್ತಾರೆ. ಪ್ರಿಯಾಂಕ ಚೋಪ್ರಾ ಅವರ ಸಾಧನೆಗಳಿಂದ ನಂದಿನಿ ಹೆಚ್ಚು ಸ್ಫೂರ್ತಿ ಪಡೆದುಕೊಂಡಿದ್ದಾರೆಂದು ಸಂದರ್ಶನ ಒಂದರಲ್ಲಿ ತಿಳಿಸಿದೆ.

‘ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2023’ರ 59ನೇ ಆವೃತ್ತಿಯಲ್ಲಿ ನಂದಿನಿ ಗುಪ್ತಾ ಕಿರೀಟ ಗೆದ್ದುಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಮತ್ತು ಅನನ್ಯ ಪಾಂಡೆ ಭಾಗವಹಿಸಿದ್ದರು.

ಇವನ್ನೂ ಓದಿ: ನನ್ನನ್ನು ಬಂಧಿಸಲು ಸಿಬಿಐಗೆ ಬಿಜೆಪಿ ಸೂಚಿಸಿದೆ: ಅರವಿಂದ ಕೇಜ್ರಿವಾಲ್ ಆರೋಪ

ಶೂಟೌಟ್ಗೆ ಬಲಿಯಾದ ಅತೀಕ್ ವಿರುದ್ಧ ದಾಖಲಾಗಿದ್ದವು 100ಕ್ಕೂ ಅಧಿಕ ಪ್ರಕರಣ

ಪುಲ್ವಾಮಾ ದಾಳಿ ಸರ್ಕಾರದ್ದೇ ಲೋಪ: ಕಾಶ್ಮೀರದ ಮಾಜಿ ರಾಜ್ಯಪಾಲ

ಗ್ಯಾಂಗ್ಸ್ಟರ್ ಅತೀಕ್, ಅಶ್ರಫ್ ಗುಂಡೇಟಿಗೆ ಬಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.