ನವದೆಹಲಿ: ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ನಲ್ಲಿ ಠೇವಣಿ ಇರಿಸಿರುವ ಗ್ರಾಹಕರು ಪ್ರತಿದಿನ ₹ 50,000 ಹಣವನ್ನು ವಿತ್ಡ್ರಾ ಮಾಡಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ಈ ಹಿಂದೆ ವಿತ್ಡ್ರಾ ಮಿತಿ ₹40,000 ಇತ್ತು.

ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಈ ನಿರ್ಧಾರದಿಂದಾಗಿ ಬ್ಯಾಂಕ್ನಲ್ಲಿ ಇರುವ ಒಟ್ಟಾರೆ
ಠೇವಣಿದಾರರಲ್ಲಿ ಶೇ 78ರಷ್ಟು ಗ್ರಾಹಕರು ತಮ್ಮ ಖಾತೆಯಲ್ಲಿರುವ ಪೂರ್ತಿ ಹಣವನ್ನು ಪಡೆಯಲು ಅವಕಾಶ ದೊರೆತಂತಾಗಿದೆ.

ಏಕಕಾಲಕ್ಕೇ ₹ 50 ಸಾವಿರ ಪಡೆಯಲು ಸಾಧ್ಯವಿಲ್ಲ. ಹಂತ ಹಂತವಾಗಿ ಪಡೆಯಬೇಕಾಗುತ್ತದೆ. ಬ್ಯಾಂಕ್ನ ಎಟಿಎಂನಿಂದಲೇ ಈ ಮೊತ್ತವನ್ನು ಪಡೆಯಲೂ ಅವಕಾಶ ನೀಡಲಾಗಿದೆ.

ಇದನ್ನೂ ಓದಿ:ಪಿಎಂಸಿ ಬ್ಯಾಂಕ್ ಹಗರಣ: ಮಾಜಿ ನಿರ್ದೇಶಕರ ಬಂಧನ ಅವಧಿ ವಿಸ್ತರಣೆ

ಸೆಪ್ಟೆಂಬರ್ನಲ್ಲಿ ಆರ್ಬಿಐ, ಬ್ಯಾಂಕ್ಗೆ ಆರು ತಿಂಗಳ ಕಾಲ ನಿರ್ಬಂಧ ವಿಧಿಸಿತ್ತು. ಅಲ್ಲದೆ ಠೇವಣಿದಾರರಿಗೆ ಒಟ್ಟಾರೆ ಮೊತ್ತದಲ್ಲಿ ₹ 1 ಸಾವಿರ ಮಾತ್ರ ಹಿಂದಕ್ಕೆ ಪಡೆಯಲು ಅನುಮತಿ ನೀಡಿತ್ತು. ಇದಕ್ಕೆ ಠೇವಣಿದಾರರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಮಿತಿಯನ್ನು ₹ 40 ಸಾವಿರಕ್ಕೆ ಹೆಚ್ಚಿಸಲಾಗಿತ್ತು.

ಬ್ಯಾಂಕ್ನ ಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದು, ಠೇವಣಿದಾರರ ಹಿತರಕ್ಷಣೆಯ ಉದ್ದೇಶದಿಂದ ಇನ್ನೂ ಹೆಚ್ಚಿನ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಆರ್ಬಿಐ ತಿಳಿಸಿದೆ.

ಇದನ್ನೂ ಓದಿ:₹6,500 ಕೋಟಿ ವಂಚನೆ: ಪಿಎಂಸಿ ಬ್ಯಾಂಕ್ನಿಂದ ವಜಾಗೊಂಡಿರುವ ಎಂಡಿ ಬಂಧನ

ಬ್ಯಾಂಕಿಂಗ್ ನಿಯಂತ್ರಣ ಕ್ರಮಗಳನ್ನು ಸಮರ್ಪಕವಾಗಿ ಪಾಲಿಸುವಲ್ಲಿ ವಿಫಲವಾಗಿರುವ ಕಾರಣಕ್ಕಾಗಿ ಪಿಎಂಸಿ ಬ್ಯಾಂಕ್ ಮೇಲೆ ಆರ್ಬಿಐ ಕೆಲವು ನಿರ್ಬಂಧಗಳನ್ನು ಹೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.