ನವದೆಹಲಿ: ಗಣರಾಜ್ಯೋತ್ಸವ ಆಚರಣೆಗೆ ಬೆರಳೆಣಿಕೆಯ ದಿನಗಳ ಬಾಕಿ ಇರುವಾಗಲೇ, ರಾಷ್ಟ್ರ ರಾಜಧಾನಿಯಲ್ಲಿ ರಾಷ್ಟ್ರ ವಿರೋಧಿ ಗೋಡೆ ಬರಹಗಳು ಕಂಡು ಬಂದಿವೆ.

‘ಖಲಿಸ್ತಾನ್ ಜಿಂದಾಬಾದ್‘, ‘ಜನಮತ ಸಂಗ್ರಹ 2022‘ ಎನ್ನುವ ಬರಹಗಳು ರಾತ್ರೋರಾತ್ರಿ ಪ್ರತ್ಯಕ್ಷವಾಗಿದ್ದು, ಅವುಗಳನ್ನು ಅಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗುರ್ಮುಖಿ ಹಾಗೂ ಹಿಂದಿ ಭಾಷೆಯಲ್ಲಿ ಬರೆಯಲಾಗಿದ್ದು, ದೆಹಲಿಯ ಪಶ್ಚಿಮ ವಿಹಾರ ಪ್ರದೇಶದ ಗೋಡೆಗಳಲ್ಲಿ ಬರಹ ಪತ್ತೆಯಾಗಿದೆ.

ಇದು ಭದ್ರತಾ ಲೋಪ ಅಲ್ಲ ಎಂದು ಹೇಳಿರುವ ದೆಹಲಿ ಪೊಲೀರು, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

ಜನ ವಸತಿ ಕಡಿಮೆ ಇರುವ ಸ್ಥಳಗಳಲ್ಲಿ, ರಾತ್ರೋರಾತ್ರಿ ಈ ಕೃತ್ಯ ಎಸಗಲಾಗಿದೆ. ಈ ಕೃತ್ಯದ ಹಿಂದೆ ನಿಷೇಧಿತ ಸಂಘಟನೆಗಳ ಕೈವಾಡ ಇರಬಹುದು ಎಂದು ಶಂಕಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.