ಜೈಪುರ: ಬಿಜೆಪಿಗೆ ಸೇರುವಂತೆ ಪೈಲಟ್ ಅವರು ನನಗೆ ಹಣದ ಆಮಿಷವೊಡ್ಡಿದ್ದರು ಎನ್ನುವ ಕಾಂಗ್ರೆಸ್ ಶಾಸಕ ಗಿರಿರಾಜ್ ಸಿಂಗ್ ಮಾಲಿಂಗ ಅವರ ಹೇಳಿಕೆಗೆ ಸಂಬಂಧಿಸಿದಂತೆ ರಾಜಸ್ಥಾನದ ಉಪಮುಖ್ಯಮಂತ್ರಿ ಮತ್ತು ಪಿಸಿಸಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲ್ಪಟ್ಟ ಸಚಿನ್ ಪೈಲಟ್ ಅವರು ಲೀಗಲ್ ನೊಟೀಸ್ ನೀಡಿದ್ದಾರೆ.

ಮಾಲಿಂಗ ಅವರು ಪತ್ರಿಕಾಗೋಷ್ಠಿಯಲ್ಲಿ ನೀಡಿದ 'ಸುಳ್ಳು ಮತ್ತು ದುರುದ್ದೇಶಪೂರಿತ ಹೇಳಿಕೆಗೆ' ಲೀಗಲ್ ನೊಟೀಸ್ ಕಳುಹಿಸುವುದಾಗಿ ಪೈಲಟ್ ಅವರ ಅಧಿಕೃತ ವಾಟ್ಸಾಪ್ ಗ್ರೂಪ್ನಲ್ಲಿ ಮಂಗಳವಾರ ರಾತ್ರಿ ಸಂದೇಶವೊಂದು ತಿಳಿಸಿದೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಾಲಿಂಗ ಅವರು, ಪೈಲಟ್ ಅವರ ನಿವಾಸದಲ್ಲಿ ಮಾತುಕತೆ ನಡೆದಿತ್ತು ಮತ್ತು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ನೇತೃತ್ವದ ರಾಜ್ಯ ಸರ್ಕಾರವನ್ನು ಉರುಳಿಸುವ ಸಂಚಿನ ಕುರಿತು ಎಚ್ಚರಿಸಿದ್ದರು.

'ನಾನು ಸಚಿನ್ ಜಿ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ, ಅವರು ಬಿಜೆಪಿಗೆ ಸೇರುವಂತೆ ನನಗೆ ಹಣದ ಆಮಿಷವೊಡ್ಡಿದ್ದರು ಆದರೆ ನಾನು ಬಿಜೆಪಿಗೆ ಸೇರುವುದಿಲ್ಲ ಎಂದು ನಿರಾಕರಿಸಿದ್ದೇನೆ' ಎಂದು ಮಾಲಿಂಗ ಹೇಳಿದ್ದರು.

ಮಾಲಿಂಗ ಅವರು ಗೆಹ್ಲೋಟ್ ಅವರ ಶಿಬಿರದಲ್ಲಿದ್ದು, ಇತರ ಶಾಸಕರೊಂದಿಗೆ ದೆಹಲಿ ಹೆದ್ದಾರಿಯಲ್ಲಿರುವ ಹೋಟೆಲ್ನಲ್ಲಿ ತಂಗಿದ್ದಾರೆ. ಪ್ರತಿಕ್ರಿಯೆಗಾಗಿ ಇತರ ಶಾಸಕರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.