ನವದೆಹಲಿ: ಜಾರಿ ನಿರ್ದೇಶನಾಲಯದ ನೂತನ ಮುಖ್ಯಸ್ಥರನ್ನಾಗಿ ಐಆರ್ಎಸ್ ಅಧಿಕಾರಿ ಸಂಜಯ್ಕುಮಾರ್ ಮಿಶ್ರಾ ಅವರನ್ನು ಶನಿವಾರ ನೇಮಿಸಲಾಗಿದೆ.

ಹಾಲಿ ಮುಖ್ಯಸ್ಥ ಕರ್ನಲ್ಸಿಂಗ್ ಭಾನುವಾರ ನಿವೃತ್ತಿಯಾಗಲಿದ್ದಾರೆ. ತೆರ ವಾದ ಹುದ್ದೆಯನ್ನು ಮಿಶ್ರಾ ಅಲಂಕರಿಸಿದ್ದಾರೆ.ಇ.ಡಿಯ ಪ್ರಧಾನ ವಿಶೇಷ ನಿರ್ದೇಶಕರಾಗಿರುವ ಮಿಶ್ರಾ ಅವರಿಗೆ, ಹೆಚ್ಚುವರಿಯಾಗಿ ಮೂರು ತಿಂಗಳ ಅವಧಿಗೆ ಇ.ಡಿ. ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.ಪ್ರಧಾನಿ ಮೋದಿ ನೇತೃತ್ವದ ಸಂಪುಟ ನೇಮ ಕಾತಿ ಸಮಿತಿ ಈ ಆದೇಶ ಹೊರಡಿಸಿದೆ.

1984ರ ಬ್ಯಾಚ್ನ ಭಾರತೀಯ ಕಂದಾಯ ಸೇವೆ (ಐಆರ್ಎಸ್) ಅಧಿಕಾರಿಯಾಗಿರುವ ಮಿಶ್ರಾ, ಆದಾಯ ತೆರಿಗೆ ಇಲಾಖೆಯಲ್ಲಿ ಹಲವು ಮಹತ್ವದ ಹುದ್ದೆ ನಿಭಾಯಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಸೋನಿಯಾ ಗಾಂಧಿ ಕುಟುಂಬದ ಪಾತ್ರವಿದೆ ಎಂದು ಹೇಳಲಾದ ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖೆ ಯನ್ನು ಇವರು ಮಾಡಿದ್ದಾರೆ.ಸದ್ಯ ಆದಾಯ ತೆರಿಗೆ ಇಲಾಖೆಯ ಮುಖ್ಯ ಆಯುಕ್ತರನ್ನಾಗಿ ನಿಯೋಜಿಸಲಾಗಿದ್ದು, ಹೆಚ್ಚುವರಿಯಾಗಿ ಅವರು ಇ.ಡಿ ಮುಖ್ಯ ಸ್ಥರ ಹುದ್ದೆಯನ್ನೂ ನಿಭಾಯಿಸಲಿದ್ದಾರೆ.

ಇ.ಡಿ ನಿರ್ದೇಶಕ ಹುದ್ದೆಯು ಕೇಂದ್ರ ಸರ್ಕಾರದಲ್ಲಿ ಹೆಚ್ಚುವರಿ ಕಾರ್ಯದರ್ಶಿಗೆ ಸಮನಾದ ಹುದ್ದೆಯಾಗಿದೆ.

₹33 ಸಾವಿರ ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

ಮೂರು ವರ್ಷಗಳಿಂದ ಇ.ಡಿಯ ಮುಖ್ಯಸ್ಥರಾಗಿದ್ದ ಕರ್ನಲ್ ಸಿಂಗ್ ಅವರ ಅಧಿಕಾರಾವಧಿ ಭಾನುವಾರಕ್ಕೆ ಕೊನೆಗೊಂಡಿದೆ. 1984ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಸಿಂಗ್ ಅವರ ತಮ್ಮ ಅವಧಿಯಲ್ಲಿ ಅತಿ ಪ್ರಮುಖವಾದ ಪ್ರಕರಣಗಳ ತನಿಖೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ.

ಅತಿಗಣ್ಯರ ಹೆಲಿಕಾಪ್ಟರ್ ಹಗರಣ, ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ವಿರುದ್ಧದ ಪ್ರಕರಣ, ನೀರವ್ ಮೋದಿ ಹಾಗೂ ವಿಜಯ್ ಮಲ್ಯರ ಹಣ ವಂಚನೆಯ ಪ್ರಕರಣ ಇವುಗಳಲ್ಲಿ ಪ್ರಮುಖವಾದವು. ಇವರ ಅವಧಿಯಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಕ್ರಿಯಾಶೀಲವಾಗಿದ್ದ ಇ.ಡಿ. ಪ್ರಕರಣ ದಾಖಲಿಸುವುದರಲ್ಲಿ ಮತ್ತು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದರಲ್ಲಿ ದಾಖಲೆ ಮಾಡಿದೆ. ಇ.ಡಿಯು ಕರ್ನಲ್ ಅವರ ಮೂರು ವರ್ಷಗಳ ಅವಧಿಯಲ್ಲಿ ₹33,563 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. 2005ರಿಂದ 2015ರ ಅವಧಿಯಲ್ಲಿ ಈ ಮೊತ್ತ ₹9,003 ಕೋಟಿ ಮಾತ್ರ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.