ಮುಂಬೈ: ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಯ ಶ್ರಮಕ್ಕೆ ಚಪ್ಪಾಳೆಯ ಮೂಲಕ ಶ್ಲಾಘನೆ ವ್ಯಕ್ತಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ಕರೆ ನೀಡಿದ್ದನ್ನು ಶಿವಸೇನಾ ಮುಖಂಡ ಸಂಜಯ್ ರಾವುತ್ ಟೀಕಿಸಿದ್ದಾರೆ.

‘ಕೊರೊನಾ ಹತ್ತಿಕ್ಕಲು ಸರ್ಕಾರ ಗಂಭೀರ ಪ್ರಯತ್ನಗಳನ್ನು ಮಾಡುತ್ತಿಲ್ಲ ಎಂಬುದಕ್ಕೆ ಜನರ ಪ್ರತಿಕ್ರಿಯೆ ಸಾಕ್ಷಿಯಾಗಿತ್ತು. ಜನತಾ ಕರ್ಫ್ಯೂವನ್ನು ಜನರು ಗಂಭೀರವಾಗಿ ಪರಿಗಣಿಸಲಿಲ್ಲ. ಮೋದಿ ಅವರು ಗಂಭೀರವಾದ ಸಮಸ್ಯೆಯನ್ನು ಹಬ್ಬದ ವಾತಾವರಣವಾಗಿ ಪರಿವರ್ತಿಸಿದರು ಎಂದು ರಾವುತ್ ಟ್ವೀಟ್ ಮೂಲಕ ಟೀಕಿಸಿದ್ದಾರೆ.

‘ಸಾಮಾಜಿಕ ಲಾಕ್ಡೌನ್ ಅನ್ನು ಜನರು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಪ್ರಧಾನಿ ಈಗ ಹೇಳುತ್ತಿದ್ದಾರೆ. ಮಾನ್ಯ ಪ್ರಧಾನಿಯವರೇ, ಭಯ ಮತ್ತು ಆತಂಕದ ವಿಚಾರವನ್ನು ನೀವು ಹಬ್ಬದ ವಾತಾವರಣವನ್ನಾಗಿಸಿದ ಕಾರಣದಿಂದ ಹೀಗಾಗಿದೆ. ಸರ್ಕಾರವು ಗಾಂಭೀರ್ಯವನ್ನು ಪ್ರದರ್ಶಿಸಿದ್ದರೆ, ಅದಕ್ಕೆ ಅನುಗುಣವಾಗಿ ಜನರೂ ವರ್ತಿಸುತ್ತಿದ್ದರು’ ಎಂದಿದ್ದಾರೆ.

ಪ್ರಧಾನಿಯ ಕರೆಗೆ ಓಗೊಟ್ಟು ಭಾನುವಾರ ದಿನವಿಡೀ ಜನತಾ ಕರ್ಫ್ಯೂ ಆಚರಿಸಿದ್ದ ಜನರು, ಸಂಜೆ ಗುಂಪುಗುಂಪಾಗಿ ಬೀದಿಗಿಳಿದು ಚಪ್ಪಾಳೆ ತಟ್ಟುವುದು, ಗಂಟೆ ಬಾರಿಸುವುದೇ ಮುಂತಾದ ಚಟುವಟಿಕೆಗಳಲ್ಲಿ ತೊಡಗಿದ್ದರು. ಕೆಲವೆಡೆ ನೂರಾರು ಜನರು ಸೇರಿ ಮೆರವಣಿಗೆಯನ್ನೂ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.