ಶುಕ್ರವಾರ, 27 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲ್ಯಾಂಡ್‌ಮಾರ್ಕ್‌ ತೀರ್ಪುಗಳ ಸಾರಾಂಶ ಒದಗಿಸಲು ಸುಪ್ರೀಂನಿಂದ ವೆಬ್‌ಪೇಜ್‌

Published : 27 ಸೆಪ್ಟೆಂಬರ್ 2024, 13:46 IST
Last Updated : 27 ಸೆಪ್ಟೆಂಬರ್ 2024, 13:46 IST
ಫಾಲೋ ಮಾಡಿ
Comments

ನವದೆಹಲಿ: ಜನರಿಗೆ ಮಹತ್ವದ ತೀರ್ಪುಗಳ ಸಾರಾಂಶ ಒದಗಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್‌ ನೂತನ ವೆಬ್‌ಪೇಜ್‌ ಆರಂಭಿಸಿದೆ.

‘ಲ್ಯಾಂಡ್‌ಮಾರ್ಕ್‌ ಜಜ್‌ಮೆಂಟ್ ಸಮರೀಜ್’ ಎಂಬ ವೆಬ್‌ಪೇಜ್ ಆರಂಭಿಸಲಾಗಿದ್ದು, ಮಹತ್ವದ ತೀರ್ಪುಗಳನ್ನು ಜನರು ಸುಲಭವಾಗಿ ಅರ್ಥ ಮಾಡಿಕೊಳ್ಳುವುದಕ್ಕೆ ಇದು ಅನುಕೂಲ ಕಲ್ಪಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ ಪ್ರಕಟಣೆ ತಿಳಿಸಿದೆ.

ಸುಪ್ರೀಂ ಕೋರ್ಟ್‌ನ ಸಂಶೋಧನೆ ಮತ್ತು ಯೋಜನಾ ಕೇಂದ್ರವು ತೀರ್ಪುಗಳ ಸಾರಾಂಶ ಸಿದ್ಧಪಡಿಸುತ್ತದೆ.

ಪ್ರಜೆಗಳಿಗೆ ತೀರ್ಪುಗಳ ಮಾಹಿತಿ ಇರಬೇಕು, ಕಾನೂನು ಕುರಿತು ಜಾಗೃತಿ ಮೂಡಿಸುವುದು ಹಾಗೂ ಕಾನೂನು ಅನುಷ್ಠಾನ ಪ್ರಕ್ರಿಯೆಯಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಬೇಕು ಎಂಬ ಸುಪ್ರೀಂಕೋರ್ಟ್‌ನ ಆಶಯದಂತೆ ಈ ವೆಬ್‌ಪೇಜ್‌ ರೂಪಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಸುಪ್ರೀಂ ಕೋರ್ಟ್‌ನ ತೀರ್ಪುಗಳು ಎಲ್ಲರಿಗೂ ಸಿಗುವಂತಾಗಬೇಕು. ತೀರ್ಪುಗಳು ಸಾಮಾನ್ಯವಾಗಿ ದೀರ್ಘವಾಗಿರುತ್ತವೆ. ಸಂಕೀರ್ಣವಾದ ಭಾಷೆ ಬಳಸಲಾಗಿರುತ್ತದೆ. ಇದರಿಂದ ಜನರು ತೀರ್ಪುಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ತೊಂದರೆ ಎದುರಿಸುತ್ತಾರೆ. ಕೆಲವೊಮ್ಮೆ ಅಪಾರ್ಥ ಮಾಡಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಈ ಎಲ್ಲ ಸಮಸ್ಯೆಗಳ ನಿವಾರಣೆಗಾಗಿ ಈ ವೆಬ್‌ಪೇಜ್‌ ಆರಂಭಿಸಲಾಗಿದೆ’ ಎಂದೂ ತಿಳಿಸಲಾಗಿದೆ.

ವೆಬ್‌ಪೇಜ್‌ ವೈಶಿಷ್ಟ್ಯಗಳು

* ವರ್ಷವಾರು ಮಹತ್ವದ ತೀರ್ಪುಗಳ ಪಟ್ಟಿ ಇರಲಿದೆ

* ಸಾರ್ವಜನಿಕ ಹಿತಾಸಕ್ತಿಯ ತೀರ್ಪುಗಳ ಅಳವಡಿಕೆ

* ಪ್ರಕರಣ ಕುರಿತು ಒಂದು ಸಾಲಿನ ವಿವರಣೆ

* ತೀರ್ಪಿನ ಪೂರ್ಣಪಾಠ ಮತ್ತು ವಿಚಾರಣೆಯ ವಿಡಿಯೊಗೆ ಲಿಂಕ್‌ ನೀಡಲಾಗಿರುತ್ತದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT