ಮುಂಬೈ (ಪಿಟಿಐ): ಪ್ರತ್ಯೇಕ ಪಕ್ಷ ಎಂದು ಹೇಳಿಕೊಳ್ಳುವ ಯಾವುದೇ ಗುಂಪಿನ ಪ್ರಾತಿನಿಧ್ಯವೂ ವಿಧಾನಸಭೆಯಲ್ಲಿ ಕಂಡುಬಂದಿಲ್ಲ ಎಂದು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಮಂಗಳವಾರ ಹೇಳಿದ್ದಾರೆ. ಜೊತೆಗೆ, ಶಿಂದೆ ನೇತೃತ್ವದ, 55 ಶಾಸಕರ ಬಲ ಇರುವ ಶಿವಸೇನಾವನ್ನು ಮಾತ್ರ ತಾವು ಗುರುತಿಸಿರುವುದಾಗಿ ಹೇಳಿದ್ದಾರೆ.

ಫೆಬ್ರುವರಿ 27ರಿಂದ ಮಾರ್ಚ್ 25ರ ವರೆಗೆ ರಾಜ್ಯದ ಬಜೆಟ್ ಅಧಿವೇಶನ ನಡೆಯಲಿದೆ. ಅಧಿವೇಶನಕ್ಕೆ ಕೆಲವೇ ದಿನಗಳು ಬಾಕಿ ಇರುವಂತೆ ಅವರು ಹೀಗೆ ಹೇಳಿದ್ದಾರೆ.

‘ಈ ವರೆಗೂ ಶಿವಸೇನಾದ ಮತ್ತೊಂದು ಬಣದಿಂದ ಯಾವುದೇ ಪ್ರಾತಿನಿಧ್ಯ ಕಂಡುಬಂದಿಲ್ಲ. ಒಂದು ವೇಳೆ ನನಗೆ ಪತ್ರ ಬಂದರೆ, ಸಂವಿಧಾನದ 10ನೇ ಪರಿಚ್ಛೇದದ (ಪಕ್ಷಾಂತರ ಕುರಿತ ಪರಿಚ್ಛೇದ) ಪ್ರಕಾರ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಬಣವನ್ನೇ ನಿಜವಾದ ಶಿವಸೇನಾ ಎಂದು ಗುರುತಿಸಿದ ಚುನಾವಣಾ ಆಯೋಗ (ಇ.ಸಿ), ಶಿಂದೆ ಬಣಕ್ಕೆ ಬಿಲ್ಲು, ಬಾಣದ ಚಿಹ್ನೆ ಬಳಸಲು ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ನಾರ್ವೇಕರ್ ಈ ಹೇಳಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.