ಜಾರ್ಖಂಡ್:ಮಹಾರಾಷ್ಟ್ರದಲ್ಲಿ ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಯು ಅವಕಾಶವಾದದಿಂದ ಕೂಡಿದೆ ಎಂದು ಕೇಂದ್ರ ಸಚಿವ ನಿತೀನ್ ಗಡ್ಕರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆ ಮೂರು ಪಕ್ಷಗಳು ಜೊತೆ ಸೇರಿ ಸರ್ಕಾರ ರಚಿಸಿದರೂ, ಅದರ ಆಯಸ್ಸು 8 ತಿಂಗಳ ಮೇಲೆ ಇರಲಾರದು ಎಂದು ಹೇಳಿದ್ದಾರೆ.

ಜಾರ್ಖಂಡ್ ವಿಧಾನ ಸಭಾ ಚುನಾವಣೆ ಪ್ರಚಾರದ ವೇಳೆ ಮಾತನಾಡಿರುವ ಗಡ್ಕರಿ, ’ಮೂರು ಪಕ್ಷಗಳ ಮೈತ್ರಿಯು ಅವಕಾಶವಾದಿತನದಿಂದ ಕೂಡಿದೆ. ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಬೇಕು ಎನ್ನುವ ಒಂದೇ ಕಾರಣಕ್ಕಾಗಿ ಅವರು ಒಗ್ಗೂಡಿದ್ದಾರೆ. ಮೂರು ಪಕ್ಷಗಳು ಸೇರಿ ಸರ್ಕಾರ ರಚಿಸುವುದರ ಬಗ್ಗೆ ನನಗೆ ಸಂಶಯಗಳಿವೆ. ಒಂದು ವೇಳೆ ಸರ್ಕಾರ ರಚನೆಯಾದರೂ, ಅದರ ಆಯಸ್ಸು 8 ತಿಂಗಳ ಮೇಲೆ ಇರದು,’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.