ನವದೆಹಲಿ: ಸುನಂದಾ ಪುಷ್ಕರ್ ಸಾವಿನ ಪ್ರಕರಣದ ವಿಚಾರಣೆ ದಿನಾಂಕವನ್ನು ಡಿಸೆಂಬರ್ 01ಕ್ಕೆ ನಿಗದಿಪಡಿಸಿರುವ ಇಲ್ಲಿನ ಪಟಿಯಾಲ ಹೈಕೋರ್ಟ್, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಾಂಗ್ರೆಸ್ ನಾಯಕ ಹಾಗೂ ಸುನಂದಾ ಪತಿ ಶಶಿ ತರೂರ್ ಅವರಿಗೆ ವಾಪಸ್ ಮಾಡುವಂತೆ ಪೊಲೀಸರಿಗೆ ಸೂಚಿಸಿದೆ.

ಹಾರ್ಡ್ ಡಿಸ್ಕ್ನಲ್ಲಿರುವ ಕೆಲವು ದಾಖಲೆಗಳು(ಸುನಂದಾ ಪುಷ್ಕರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದವು) ತರೂರ್ ಅವರಿಗೆ ಲಭ್ಯವಿಲ್ಲ ಎಂದು ತರೂರ್ ಪರ ವಕೀಲ ಕೊರ್ಟ್ಗೆ ತಿಳಿಸಿದ್ದರು.

ದೆಹಲಿಯ ಪಂಚತಾರಾ ಹೋಟೆಲೊಂದರಲ್ಲಿ 2014ರ ಜನವರಿ 17ರಂದು ಸುನಂದಾ ಮೃತಪಟ್ಟಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ನಲ್ಲಿವಿಚಾರಣೆ ನಡೆಸಿದ್ದ ಪೊಲೀಸರು, ತರೂರ್ ಅವರಿಂದ ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದರು.

ಈ ಸಂಬಂಧ ತರೂರ್ ಮೇಲ್ಮನವಿ ಸಲ್ಲಿಸಿದ್ದರು. ಕೋರ್ಟ್ ವಿಚಾರಣೆ ನಡೆಸಿ ಆದೇಶ ನೀಡಿದ ಬಳಿಕ, ಪ್ರಕರಣಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳು ಹಾಗೂ ವಿದ್ಯುನ್ಮಾನ ಉಪಕರಣಗಳನ್ನು ಪೊಲೀಸರು ತರೂರ್ಗೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.