ನವದೆಹಲಿ: ಬಿಹಾರದಲ್ಲಿ ಆರ್‌ಜೆಡಿ–ಜೆಡಿ(ಯು) ಮೈತ್ರಿಯನ್ನು ಬಿಜೆಪಿ ಶೀಘ್ರದಲ್ಲೇ ಮುರಿಯಲಿದೆ ಎಂದು ಆ ಪಕ್ಷದ ನಾಯಕ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.

‘ಮಣಿಪುರದಲ್ಲಿ ಐವರು ಜೆಡಿ(ಯು) ಶಾಸಕರು ಬಿಜೆಪಿ ಸೇರಿದ್ದಾರೆ. ಇದರೊಂದಿಗೆ ಮಣಿಪುರ ಜೆಡಿ(ಯು) ಮುಕ್ತವಾಗಿದೆ. ಆ ಶಾಸಕರೆಲ್ಲ ಎನ್‌ಡಿಎ ಭಾಗವಾಗಿ ಉಳಿಯಲು ಬಯಸಿದ್ದಾರೆ. ಬಿಹಾರದ ಜೆಡಿ(ಯು)–ಆರ್‌ಜೆಡಿ ಮೈತ್ರಿಕೂಟವನ್ನೂ ನಾವು ಶೀಘ್ರದಲ್ಲೇ ಮುರಿಯಲಿದ್ದೇವೆ. ಬಿಹಾರವನ್ನೂ ಜೆಡಿ(ಯು) ಮುಕ್ತ ಮಾಡಲಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಬಿಹಾರದಲ್ಲಿ ದೇಗುಲ ಪ್ರವೇಶಿಸಿದ ಮುಸ್ಲಿಂ ಸಚಿವ: ಬಿಜೆಪಿ ಆಕ್ರೋಶ

ಮಣಿಪುರದ ಐವರು ಜೆಡಿ(ಯು) ಶಾಸಕರು ಶುಕ್ರವಾರ ಬಿಜೆಪಿ ಜತೆ ಸೇರಿದ್ದರು. ಇದರೊಂದಿಗೆ ಆ ರಾಜ್ಯದಲ್ಲಿ ಬಿಜೆಪಿ ಜತೆ ಜೆಡಿ(ಯು) ವಿಲೀನಗೊಂಡಂತಾಗಿತ್ತು. ಇದರ ಬೆನ್ನಲ್ಲೇ ಸುಶೀಲ್ ಕುಮಾರ್ ಮೋದಿ ಹೇಳಿಕೆ ನೀಡಿರುವುದಾಗಿ ‘ಎಎನ್‌ಐ’ ವರದಿ ಮಾಡಿದೆ.

ಹೋರ್ಡಿಂಗ್‌ಗಳು ಮತ್ತು ಪೋಸ್ಟರ್‌ಗಳನ್ನು ಅಳವಡಿಸುವ ಮೂಲಕ ಯಾರೂ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ಅವರು ವ್ಯಂಗ್ಯವಾಡಿದ್ದಾರೆ.

ರಾಜ್ಯದಲ್ಲಿ ತಯಾರಾದ ಉತ್ಪನ್ನ ಮಾತ್ರ ಖರೀದಿಸಿ, ಬಳಸಿ: ಬಿಹಾರ ಸಚಿವ

ಬಿಹಾರದಲ್ಲಿ ಬಿಜೆಪಿ ಜತೆಗಿನ ಮೈತ್ರಿಯನ್ನು ಕಡಿದುಕೊಂಡಿದ್ದ ಜೆಡಿ(ಯು) ಇತ್ತೀಚೆಗೆ ಆರ್‌ಜೆಡಿ, ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಜತೆಗೂಡಿ ಸರ್ಕಾರ ರಚಿಸಿದೆ. ನಂತರ ಜೆಡಿ(ಯು) ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸುತ್ತಲೇ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.